- Wednesday
- April 2nd, 2025

ಗುತ್ತಿಗಾರು ಕಮಿಲ ರಸ್ತೆಯ ಚತ್ರಪ್ಪಾಡಿ ಬಳಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿತ್ತು. ರಸ್ತೆ ಬದಿಯ ಚರಂಡಿಯನ್ನು ಸ್ಥಳೀಯ ಯುವಕರು ಸೇರಿ ದುರಸ್ತಿಗೊಳಿಸಿದರು. ರವೀಂದ್ರ ಆಜಡ್ಕ, ನಿಶ್ಚಿತ್ ರಾಂ ತುಪ್ಪದಮನೆ, ಅಜಯ್ ಸಂಪ್ಯಾಡಿ, ಶ್ರವಣ್ ಸಂಪ್ಯಾಡಿ, ಶ್ರೇಯಸ್ ಸಂಪ್ಯಾಡಿ ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದರು.

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ & ಗೈಡ್ಸ್ ದಳದ ಗೈಡ್ ವಿದ್ಯಾರ್ಥಿನಿ ಸುಶ್ಮಿತಾ.ಸಿ ಜಿಲ್ಲಾ ಸಂಸ್ಥೆ ನಡೆಸಿದ ರಾಜ್ಯ ಪುರಸ್ಕಾರ ಪದಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಾಳಿಲ ಚಾಕೋಟೆಡ್ಕ ಗುರುವಪ್ಪ ನಾಯ್ಕ ಹಾಗೂ ಶ್ರೀಮತಿ ಭಾಗೀರಥಿಯವರ ಪುತ್ರಿ.

ಸುಳ್ಯ ತಾಲೂಕಿನಲ್ಲಿ ಇಂದು 55 ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ನಿನ್ನೆ 72 ಪಾಸಿಟಿವ್ ಬಂದಿತ್ತು. ತಾಲೂಕಿನಲ್ಲಿ ಒಟ್ಟು 599 ಸಕ್ರೀಯ ಪ್ರಕರಣಗಳಿವೆ.

ಸುಳ್ಯದ ಯುವ ಉದ್ಯಮಿಗಳಾದ ಪ್ರಗ್ಯಾನ್ ಎಂಟರ್ ಪ್ರೈಸಸ್ ನ ಮಾಲಕ ಕಾರ್ತಿಕ್ ರೈ ಕನ್ನೆಜಾಲು, ಡಿಸೈನ್ ಇಂಟಿರಿಯರ್ಸ್ ನ ಅಶ್ವಿನ್ ಅಡ್ಕಾರ್, ಆದಿಲಕ್ಷ್ಮೀ ಟ್ರಾನ್ಸ್ ಪೋರ್ಟ್ ನ ರಾಜೇಶ್ ಕಿರಿಭಾಗ, ವಿನಾಯಕ ಸೂಪರ್ ಮಾರ್ಕೆಟ್ ನ ಅಮೃತ್ ರಾಜ್ ಸುಳ್ಯ ರವರ ನೇತೃತ್ವದಲ್ಲಿ ಅಶಕ್ತ ಬಡಕುಟುಂಬಗಳನ್ನು ಗುರುತಿಸಿ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ನ್ನು...

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕಿಟ್ ವಿತರಿಸಿ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡುವ ಈ...

ಸುಳ್ಯ ತಾಲೂಕಿನಲ್ಲಿ ಇಂದು 53 ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಒಟ್ಟು 519 ಸಕ್ರೀಯ ಪ್ರಕರಣಗಳಿವೆ. ಸುಳ್ಯ ನಗರ ವ್ಯಾಪ್ತಿ 10, ನಾಲ್ಕೂರು 6, ಐವರ್ನಾಡು 4, ಆಲೆಟ್ಟಿ 3, ಅರಂತೋಡು 3, ಸುಬ್ರಹ್ಮಣ್ಯ 3, ಕೊಲ್ಲಮೊಗ್ರ 3, ಅಮರ ಮುಡ್ನೂರು 2, ಮಂಡೆಕೋಲು 2, ಗುತ್ತಿಗಾರು 2, ಪಂಬೆತ್ತಾಡಿ 2, ಬೆಳ್ಳಾರೆ 2, ಏನೆಕಲ್ಲು 2,...

ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ...

ನಿನ್ನಯ ಶಕ್ತಿಯ ಪರಿಚಯ ಮಾಡಿಸು, ಸೋಲಲೆಬೇಡ ನೀನ್ಯಾರಿಗೂ…ನಿನ್ನನ್ನು ದ್ವೇಷಿಸೋ ಮನುಜರೆಲ್ಲರೂ ಪ್ರೀತಿಸುವಂತೆ ನೀ ಬದುಕು…ಬದುಕಲಿ ಬರುವ ಸೋಲು-ಗೆಲುವುಗಳ ಬಂದಂತೆಯೇ ನೀ ಸ್ವೀಕರಿಸು…ಅಹಂಕಾರ, ಮದ-ಮತ್ಸರಗಳನು ಬಿಟ್ಟು ಬಾಳು ನೀ ಬದುಕಿನಲಿ…ನಿನ್ನಯ ಬದುಕು ಸ್ಪೂರ್ತಿಯಾಗಲಿ ಮುಂದಿನ ತಲೆ-ತಲೆಮಾರಿಗೂ… ಮನಸಲಿ ಸಾವಿರ ನೋವುಗಳಿದ್ದರೂ ನಗು-ನಗುತಿರು ನೀ ಪ್ರತಿನಿಮಿಷ…ನಿನ್ನಯ ನಗುವನು ನೋಡಿ ಖುಷಿಪಡುವ ಜನರೂ ಇಹರು ಈ ಜಗದಿ…ಜೀವನವೆಂಬ ಯುದ್ದದಲ್ಲಿ ಗೆಲುವೇ...

ಕೊಲ್ಲಮೊಗ್ರ ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆಯಲ್ಲಿ ನೀರು ತುಂಬಿದ್ದು, ಕೆರೆಯ ಏರಿಯ ಮಟ್ಟ ಅಪಾಯದಲ್ಲಿತ್ತು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜೂ.15 ರಂದು ಪೈಪು ಅಳವಡಿಕೆ ಮಾಡಿ ನೀರನ್ನು ಹೊರಬಿಡುವ ಕೆಲಸ ಮಾಡಿದರು.ಈ ಸಂದರ್ಭದಲ್ಲಿ ಸಿಮೆಂಟ್ ಪೈಪುಗಳನ್ನು ಕಮಲಾಕ್ಷ ಮುಳ್ಳುಬಾಗಿಲು, ಶ್ರೀನಿವಾಸ್ ಹಾಗೂ ಕೆರೆ ಅಭಿವೃದ್ಧಿ...

All posts loaded
No more posts