Ad Widget

ಅಡ್ಕಾರು : ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪೆರಾಜೆಯ ಯುವಕ ಮೃತ್ಯು

ಇಂದು ಸಂಜೆ ಅಡ್ಕಾರು ಬಳಿಯ ಮಾವಿನಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡವರಲ್ಲಿ ಪೆರಾಜೆಯ ಕುಂಬಳಚೇರಿ ದಿನಕರ ಎಂಬವರು ಮೃತರಾಗಿರುವುದಾಗಿ ತಿಳಿದುಬಂದಿದೆ. ಇನ್ನೂ ನಾಲ್ವರ ಗಾಯಗೊಂಡಿದ್ದಾರೆ.ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಪಿಕಪ್ ವಾಹನಕ್ಕೆ ಕಂಟೈನರ್ ಡಿಕ್ಕಿ ಹೊಡೆದು ಐವರು ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಟಿಪ್ಪರ್ ಚಾಲಕ ದಿನಕರ್ ಮತ್ತಿತರರನ್ನು ಕೆ.ವಿ.ಜಿ. ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ದಿನಕರ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಅಡ್ಕಾರು ಬಳಿ ಪಿಕಪ್ ಗೆ ಕಂಟೈನರ್ ಢಿಕ್ಕಿ : ಓರ್ವ ಗಂಭೀರ

ಪಿಕಪ್ ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಪಿಕಪ್ ನಲ್ಲಿದ್ದ ಓರ್ವನಿಗೆ ಗಂಭೀರ ಸೇರಿದಂತೆ ಐವರಿಗೆ ಗಾಯವಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆಯಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ಸಂಪಾಜೆಗೆ ತೆರಳುತ್ತಿದ್ದ ಪಿಕಪ್ ಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಅಡ್ಕಾರಿನ ಮಾವಿನಕಟ್ಟೆಯ ಬ್ಯಾರಿಕೇಡ್ ಇಟ್ಟ ಬಳಿ ಢಿಕ್ಕಿ ಹೊಡೆದಿದ್ದು, ಪಿಕಪ್ ನಲ್ಲಿದ್ದ...
Ad Widget

ವಿನ್ಸೆಂಟ್ ಡಿಸೋಜ ನೀರಬಿದಿರೆ ನಿಧನ

ಉಬರಡ್ಕ ಮಿತ್ತೂರು ಗ್ರಾಮದ ನೀರಬಿದಿರೆ ವಿನ್ಸೆಂಟ್ ಡಿಸೋಜ ಅಲ್ಪಕಾಲದ ಅಸೌಖ್ಯದಿಂದ ಜೂ.4 ರಂದು ನಿಧನರಾದರು. ಮೃತರು ತಾಯಿ, 7 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

ಅಂದು – ಇಂದು

ಹೇ ಮಾನವ….ಆಮ್ಲಜನಕ ನೀಡುವ ಮರಗಿಡಗಳನ್ನು ಕಡೆದುರುಳಿಸುತ್ತಿದ್ದೆ ಅಂದು…ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಪರದಾಡುತ್ತಿರುವೆ ಇಂದು… ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋದೆ ಅಂದು…ಕೊರೋನಾ ಬಂತೆಂದು ಹೆದರಿ ಉದ್ಯೋಗವನ್ನು ತೊರೆದು ಮರಳಿ ಹಳ್ಳಿಗೆ ಬಂದೆ ಇಂದು… ಸಂಬಂಧಗಳ ಬೆಲೆಯನ್ನು ಮರೆತು ಹೋದೆ ಅಂದು…ಸಂಬಂಧಗಳ ನಿಜವಾದ ಬೆಲೆಯನ್ನು ತಿಳಿದು ಹಿಂತಿರುಗಿ ಬಂದೆ ಇಂದು… ಜೀವನದಲ್ಲಿ ಹಣವೇ ಮುಖ್ಯ ಎಂದು ತಿಳಿದಿದ್ದೆ...

ಸುಳ್ಯದಲ್ಲಿ 48 ಕೊರೊನಾ ಪಾಸಿಟಿವ್ – 690 ಸಕ್ರೀಯ ಪ್ರಕರಣ

ಸುಳ್ಯದಲ್ಲಿ ಇಂದು 48 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ತೊಡಿಕಾನದಲ್ಲಿ 2, ಕಳಂಜದಲ್ಲಿ 1, ಅಜ್ಜಾವರದಲ್ಲಿ 2, ನಾಲ್ಕೂರಿನಲ್ಲಿ 6, ದೇವಚಳ್ಳದಲ್ಲಿ 8, ಅಮರಮುಡ್ನೂರಿನಲ್ಲಿ 1, ಸಂಪಾಜೆಯಲ್ಲಿ 2, ಅಮರಪಡ್ನೂರಿನಲ್ಲಿ 3, ಏನೆಕಲ್ಲಿನಲ್ಲಿ 2, ಐನೆಕಿದುನಲ್ಲಿ 1, ಸುಬ್ರಹ್ಮಣ್ಯದಲ್ಲಿ 5, ಸುಳ್ಯದಲ್ಲಿ 2, ಎಡಮಂಗಲದಲ್ಲಿ 2, ಕೊಡಿಯಾಲದಲ್ಲಿ 6, ಗುತ್ತಿಗಾರಿನಲ್ಲಿ 1, ಬೆಳ್ಳಾರೆಯಲ್ಲಿ 2, ಮಂಡೆಕೋಲಿನಲ್ಲಿ 1 ಪಾಸಿಟಿವ್...

ಅಜ್ಜಾವರ : ಸೆಲ್ಕೋ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಅವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡು ಬಡವರಿಗೆ ಹಾಗೂ ಅಂಗವಿಕಲಗರಿಗೆ ಕಿಟ್ ವಿತರಣೆ ಮಾಡಲು ಸೇಲ್ಕೋ ಫೌಂಡೇಷನ್ ಗೆ ಮನವಿ ಪತ್ರ ಕಳುಹಿದ್ದರು . ಇದಕ್ಕೆ ಸ್ಪಂದಿಸಿದ ಸೆಲ್ಕೋ ಫೌಂಡೇಷನ್ 50 ಕುಟುಂಬಗಳಿಗೆ ಕಿಟ್ ನ್ನು ಅಧ್ಯಕ್ಷೆ ಸತ್ಯವತಿ ಅವರಿಗೆ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ...

ಸುಬ್ರಹ್ಮಣ್ಯ: ‘ಆಕ್ಸಿಜನ್ ಚಾಲೆಂಜ್’ ಅಭಿಯಾನಕ್ಕೆ ಚಾಲನೆ

ಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ ವತಿಯಿಂದ ಜೂನ್ 5 ರಿಂದ 5 ದಿನ 5 ಗಿಡ ನೆಡುವ ಮೂಲಕ 'ಆಕ್ಸಿಜನ್ ಚಾಲೆಂಜ್'ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕುಕ್ಕೆ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ಜೂ.8 ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ 5 ಗಿಡ ನೆಡುವ ಮೂಲಕ 4 ದಿನದ 'ಆಕ್ಸಿಜನ್ ಚಾಲೆಂಜ್'...
error: Content is protected !!