Ad Widget

ಯಾರಿಗಾಗಿ ಈ ಬದುಕು…..? – ಬದುಕಿಗಾಗಿ ಅಲ್ಲ ಈ ಬದುಕು…..

ಹೌದು… ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿನಿಂದ ಸಾಯುವವರೆಗೂ ಬದುಕುತ್ತಲೇ ಇರುತ್ತಾನೆ. ಕೆಲವೊಬ್ಬರು ತಮಗಾಗಿ ಬದುಕುತ್ತಾರೆ, ತಮಗಾಗಿ ಬದುಕಬೇಕು ನಿಜ ಆದರೆ ತಮ್ಮ ಜೀವನದ ಸ್ವಲ್ಪ ಭಾಗವನ್ನು ಇತರರಿಗಾಗಿ ಮೀಸಲಿಡಬೇಕು. ಕೆಲವೊಬ್ಬರು ಇತರರಿಗಾಗಿ ಬದುಕುತ್ತಾರೆ. ತಮ್ಮ ಜೀವನದ ಸ್ವಲ್ಪ ಭಾಗವನ್ನು ಇತರರಿಗಾಗಿ ಮೀಸಲಿಡುತ್ತಾರೆ. ಕೆಲವೊಬ್ಬರು ತಮ್ಮಲ್ಲೇ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಇನ್ನೂ ಕೆಲವರು ಇತರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಇತರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುವವರು ನಿಸ್ವಾರ್ಥಿಗಳಾಗಿರುತ್ತಾರೆ. ಆದರೆ ತಮ್ಮ ಸಂತೋಷವನ್ನು ತಮ್ಮಲ್ಲೇ ಕಂಡುಕೊಳ್ಳುವವರನ್ನು ಸ್ವಾರ್ಥಿಗಳು ಎನ್ನಬಹುದು. ಆದರೆ ಇತರರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳದ ಎಲ್ಲರನ್ನೂ ಸ್ವಾರ್ಥಿಗಳು ಎನ್ನಲಾಗದು. ಏಕೆಂದರೆ ಕೆಲವರಿಗೆ ಸಂತೋಷಪಡಲು ಅವರ ಜೀವನದಲ್ಲಿ ಬರೀ ದುಃಖಗಳೇ ತುಂಬಿರುತ್ತವೆ. ತಮ್ಮ ಜೀವನದಲ್ಲಿ ದುಃಖಗಳನ್ನು ತುಂಬಿಕೊಂಡು ಇತರರ ಜೀವನದಲ್ಲಿ ತಮ್ಮ ಸಂತೋಷವನ್ನು ನೋಡಲು ಹೇಗೆ ಸಾಧ್ಯ…?
ಬದುಕೆನ್ನುವುದು ಬರೀ ಸಂತೋಷದಲ್ಲೇ ತುಂಬಿರುವುದಿಲ್ಲ, ಹಾಗೆಂದು ಬರೀ ದುಃಖದಲ್ಲೇ ತುಂಬಿರುವುದಿಲ್ಲ. ಬದುಕು ಎಂದ ಮೇಲೆ ಅದರಲ್ಲಿ ಸುಖ-ದುಃಖ ಎಲ್ಲವೂ ಸಮನಾಗಿರುತ್ತದೆ. ಯುಗಾದಿ ಹಬ್ಬದಲ್ಲಿನ ಬೇವು-ಬೆಲ್ಲದಂತೆ ಜೀವನದಲ್ಲಿ ಸುಖ-ದುಃಖಗಳೆರಡೂ ಸರಿಸಮನಾಗಿದ್ದಾಗ ಮಾತ್ರವೇ ಬದುಕು ನಡೆಯಲು ಸಾಧ್ಯ…..

. . . . . . .

ಬದುಕಿನಲ್ಲಿ ಕಷ್ಟವೆಂಬ ಬಿರುಗಾಳಿ ಬೀಸಿದಾಗಲೇ ಸುಖವೆಂಬ ತಂಗಾಳಿಯ ಅನುಭವವಾಗಲು ಸಾಧ್ಯ…
ಕಷ್ಟವೆಂಬ ಬೆಟ್ಟ ಹತ್ತಿದರೆ ಮಾತ್ರ ಸುಖವೆಂಬ ಬೆಟ್ಟದ ಹೂವುಗಳನ್ನು ಪಡೆಯಲು ಸಾಧ್ಯ…

ಒಬ್ಬ ವ್ಯಕ್ತಿ ತಾನು ಹುಟ್ಟಿದಾಗಲೇ ತನ್ನ ಜೀವನದ ಗುರಿ ಏನೆಂದು ನಿರ್ಧಾರ ಮಾಡಿರುವುದಿಲ್ಲ. ಅವನು ಬೆಳೆಯುತ್ತಾ ಹೋದಂತೆ ಆತನಿಗೆ ತನ್ನ ಜೀವನದ ಗುರಿ ಏನೆಂದು ಅರಿವಾಗುತ್ತದೆ. ಹಾಗೆಂದು ಎಲ್ಲರಿಗೂ ತಾವು ಇಚ್ಚಿಸಿದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕಷ್ಟಪಡಬೇಕು. ಅನೇಕ ತ್ಯಾಗಗಳನ್ನು ಮಾಡಬೇಕಾಗಿ ಬರಬಹುದು. ಏನೇ ಆದರೂ ಎದೆಗುಂದದೆ ಚಲಿಸಿದವನು ಮಾತ್ರ ತನ್ನ ಜೀವನದ ಗುರಿಯನ್ನು ತಲುಪಲು ಸಾಧ್ಯ.

ಈ ಜಗತ್ತಿನಲ್ಲಿ ಕೆಲವು ವ್ಯಕ್ತಿಗಳ ಜೀವನದ ಗುರಿಯನ್ನು ಅವರ ಜೀವನದ ಕೆಲವೊಂದು ಪರಿಸ್ಥಿತಿಗಳು ನಿರ್ಧರಿಸುತ್ತವೆ. ನಾವು ನಮ್ಮ ದುಃಖದ ಸಂಧರ್ಭದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡಬಹುದು, ಆ ದಿಕ್ಕು ಒಳ್ಳೆಯ ದಾರಿಯನ್ನು ತೋರಿಸಬಹುದು ಅಥವಾ ಕೆಟ್ಟ ದಾರಿಯನ್ನು ತೋರಿಸಬಹುದು. ಆದ್ದರಿಂದ ನಾವು ಎಷ್ಟೇ ಕಷ್ಟದ ಸಂದರ್ಭದಲ್ಲೂ ತಾಳ್ಮೆಯಿಂದ ಯೋಚಿಸಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

“ನಮ್ಮ ಹಸಿವು ನಮಗೆ ಅನ್ನದ ಬೆಲೆಯನ್ನು ತಿಳಿಸುತ್ತದೆ” ಎಂಬ ಮಾತಿನಂತೆ ನಮ್ಮ ಸೋಲು ನಮಗೆ ಗೆಲುವಿನ ಬೆಲೆಯನ್ನು ತಿಳಿಸುತ್ತದೆ. ಆದ್ದರಿಂದ ನಮ್ಮ ಜೀವನದಲ್ಲಿ ನಾವು ನಮ್ಮ ಕೈಲಾದಷ್ಟು ಇನ್ನೊಬ್ಬರ ಕಷ್ಟಕ್ಕೆ ಕೈ ಜೋಡಿಸಬೇಕು. ನಮಗೂ ಕಷ್ಟಗಳಿವೆ ನಿಜ. ಆದರೆ ಈ ಜಗತ್ತಿನಲ್ಲಿ ನಮಗಿಂತ ಕಷ್ಟದಲ್ಲಿರುವವರು ಲಕ್ಷಾಂತರ ಜನರು ಇರಬಹುದು. ನಾವು ನಮ್ಮ ಕಷ್ಟಗಳ ಬಗ್ಗೆ ಕೊರಗುತ್ತಾ ಕುಳಿತರೆ ನಮಗೆ ನಮ್ಮ ಕಷ್ಟಗಳೇ ದೊಡ್ಡದು ಎನಿಸುತ್ತದೆ. ಆದರೆ ಒಂದು ಸಾರಿ ಇತರರ ಕಷ್ಟಗಳಿಗೆ ನಾವು ಕೈ ಜೋಡಿಸಿ ಅವರ ಕಣ್ಣೀರನ್ನು ಒರೆಸಿದಾಗ ನಮಗೆ ಅವರ ಕಷ್ಟಗಳ ಬಗ್ಗೆ ಅರಿವಾಗುತ್ತದೆ. ಮತ್ತು ಆ ದೇವರು ನಮ್ಮನ್ನು ಎಷ್ಟು ಸಂತೋಷವಾಗಿ ಇಟ್ಟಿದ್ದಾನೆ ಎಂದು ತಿಳಿಯುತ್ತದೆ. ಆದ್ದರಿಂದ ಕಷ್ಟ ಎನ್ನುವುದು ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಆ ಕಷ್ಟ ಶಾಶ್ವತವಲ್ಲ. ಆದ್ದರಿಂದ ನಮಗೆ ಆ ದೇವರು ಇನ್ನೊಬ್ಬರಿಗೆ ಸಹಾಯ ಮಾಡಲು ಶಕ್ತಿ ಕೊಟ್ಟಿದ್ದಾನೆ ಎಂದಿದ್ದರೆ ನಾವು ಇತರರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಿದರೆ ನಮ್ಮಿಂದ ಸಹಾಯ ಪಡೆದವರ ಆಶಿರ್ವಾದ ನಮ್ಮನ್ನು ಸದಾ ಕಾಪಾಡುತ್ತದೆ.
ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಆ ದೇವರು ನಾವು ಮಾಡಿದ ಆ ಸಹಾಯದ ಎರಡರಷ್ಟನ್ನು ನಮಗೆ ಕರುಣಿಸುತ್ತಾನೆ. ನಿಸ್ವಾರ್ಥವಾಗಿ ಸೇವೆ ಮಾಡುವವರಿಗೆ ಆ ದೇವರು ಎಂದೂ ಕಷ್ಟಗಳು ಬರಲು ಬಿಡಲಾರ.
ಆದ್ದರಿಂದ ಕಷ್ಟದಲ್ಲಿ ಇರುವವರಿಗೆ ಅಷ್ಟೋ ಇಷ್ಟೋ ನಮ್ಮ ಕೈಯಲ್ಲಿ ಆದ ಸಹಾಯವನ್ನು ನಾವು ನಿಸ್ವಾರ್ಥವಾಗಿ ನೀಡೋಣ.

“ನಾವು ಇತರರ ಕಷ್ಟಕ್ಕೆ ಸ್ಪಂದಿಸಿದರೆ ನಮ್ಮ ಕಷ್ಟಕ್ಕೆ ಇತರರು ಸ್ಪಂದಿಸುತ್ತಾರೆ”

✍ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!