ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಕೊರೊನಾ ಸಂಕಷ್ಟ ದಲ್ಲಿರುವ ಕೃಷಿಕರಿಗೆ 50 ಸಾವಿರದ ವರೆಗೆ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ
ಕೊರೋನಾ ಲಾಕ್ ಡೌನ್ ಇದ್ದೂ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ, ಗೊಬ್ಬರ ಹಾಕುವ ಸಮಯವಾಗಿರುವ ಕಾರಣ ಕೃಷಿಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇತ್ತೀಚೆಗೆ ನಡೆದ ಸೊಸೈಟಿಯ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಆರು ತಿಂಗಳ ಅವಧಿಗೆ 25 ರಿಂದ 50 ಸಾವಿರದ ವರೆಗೆ ಸಾಲ ನೀಡಲಿದ್ದು ಅದರಲ್ಲಿ ಮೂರು ತಿಂಗಳುಗಳ ಕಾಲ ಬಡ್ಡಿ ರಹಿತ ಸಾಲವಾಗಿರಲಿದೆ. ಗುತ್ತಿಗಾರು, ನಡುಗಲ್ಲು, ತಳೂರು, ಬಳ್ಳಕ್ಕ ಇಲ್ಲಿ ಪಡಿತರ ವಿತರಣೆ ನಡೆಯುತಿದ್ದು ಅಗತ್ಯ ಇದ್ದವರ ಮನೆಗೆ ಪಡಿತರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸಂಘದ ಸದಸ್ಯರಾಗಿದ್ದು ಮೃತ ಪಟ್ಟಲ್ಲಿ ಎ.1 ರಿಂದ ಜಾರಿಗೆ ಬರುವಂತೆ ಆ ಮನೆಯವರಿಗೆ 5 ಸಾವಿರ ನೀಡಲು ನಿರ್ಧರಿಸಿದ್ದಾರೆ. ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು ಆಡಳಿತ ಮಂಡಳಿಯ ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.