ಅತೀ ಹೆಚ್ಚು ಕೊಕ್ಕೋ ಬೆಳೆ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಸುಳ್ಯವೂ ಒಂದು. ರೈತರ ಪಾಲಿಗಿಂದು ಒಂದು ಆಶಾದಾಯಕ ಬೆಳೆಯಾಗಿ ನಿರಂತರ ಆದಾಯ ಒದಗಿಸುತ್ತಿದೆ. ಕೊಕ್ಕೋ ಕೃಷಿ ಮೊದಲು ಪ್ರಾರಂಭಿಸಿದವರಲ್ಲಿ ಕೀಲಾರ್ ಗೋಪಾಲಕೃಷ್ಣಯ್ಯ, ಕುರುಂಜಿ ವಿಶ್ವನಾಥ ಗೌಡ, ಎಂ.ಎಂ.ಗಿರಿ ಮಲ್ಲಾರ, ಎಂ.ಎಚ್.ಗೌಡ ಮಲ್ಲಾರ, ಮುಂಡಾಜೆ ಹೂವಪ್ಪ ಮೊದಲಿಗರಾಗಿ ಕಾಣುತ್ತಾರೆ. 1964 ರಲ್ಲಿ ದಿ.ಗಿರಿ ಮಲ್ಲಾರ ಕೃಷಿ ಪ್ರಾರಂಭಿಸಿದಾಗ ಕೊಕ್ಕೋ ದರ ಕೇವಲ ರೂ 1 ವರೆ ಮಾತ್ರ. ಆ ವೇಳೆಗೆ ಹರ್ಡ್ ಇಂಡಿಯಾ, ನೆಸ್ಟ್ಲೇ ,ಕ್ಯಾಡ್ ಬರಿ ಮುಂತಾದ ಖಾಸಗಿ ಕಂಪೆನಿಗಳು ಖರೀದಿ ಮಾಡುತ್ತಿದ್ದವು. ಮಾರುಕಟ್ಟೆ ಇಲ್ಲದಾದಾಗ ವಾರಣಾಸಿ ಸುಬ್ರಾಯ ಭಟ್ ರ ನೇತ್ರತ್ವದಲ್ಲಿ 1978 ರಲ್ಲಿ ಪ್ರಮುಖರು ಸೇರಿ ಕ್ಯಾಂಪ್ಕೋ ಸಂಸ್ಥೆ ಹುಟ್ಟು ಹಾಕಿ ಕೊಕ್ಕೊ ಖರೀದಿ ಆರಂಭಿಸಿದ್ದರು. ಇಂದು ಕೊಕ್ಕೋ ಬೆಲೆ 65 ಕ್ಕೆ ತಲುಪಿದೆ. ಹಾಗಾಗಿ ಇಂದು ರೈತರ ಪಾಲಿಗಿದು ಉಪಬೆಳೆಯಾಗಿ ಆಶಾದಾಯಕವೆನಿಸಿದೆ. ಕೊಕ್ಕೋ ಬೆಳೆ ತೋಟದಲ್ಲಿ ತೇವಾಂಶ ಉಳಿಸುವಂತೆ ಮಾಡುತ್ತದೆ,ಕಳೆ ಬಾರದಂತೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ಕೃಷಿಕ ಗದಾಧರ ಮಲ್ಲಾರ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
- Thursday
- November 21st, 2024