
ರಾಜ್ಯದ ಕವಿಪ್ರನಿನಿ ಮತ್ತು ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳ ಅಧಿಕಾರಿ ಮತ್ತು ನೌಕರರನ್ನು ಕೊರೊನಾ ವಾರಿಯರ್ ಗಳೆಂದು ಪರಿಗಣಿಸಿ ಲಸಿಕೆ ಹಾಗೂ ಇತರ ಸೌಲಭ್ಯ ನೀಡಲು ಸರ್ಕಾರ ಆದೇಶಿಸಿದೆ. ಇಂದನ ಇಲಾಖೆಯು ಅವಶ್ಯ ಸೇವೆಯಾಗಿರುವುದರಿಂದ ಲಸಿಕೆ ಹಾಗೂ ವಿಮಾ ಯೋಜನೆಗಳನ್ನು ಜಾರಿಗೊಳಿಸಿ ಕರೊನಾ ಸೋಂಕಿನಿಂದ ಮೃತಪಟ್ಟಲ್ಲಿ ಅವಲಂಬಿತರಿಗೆ ರೂ. 50 ಲಕ್ಷದ ಮೊತ್ತವನ್ನು ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಇದರ ಅಂಗವಾಗಿ ಸುಳ್ಯದಲ್ಲಿ ಮೇ. 24 ರಂದು ಲಸಿಕೆ ವಿತರಣೆ ನಡೆಯಲಿದ್ದು ಮೆಸ್ಕಾಂ ನ ಎಲ್ಲಾ ನೌಕರರು ಕೋವಿಡ್ ಲಸಿಕೆ ಪಡೆಯಬಹುದೆಂದು ತಾಲೂಕು ಆರೋಗ್ಯ ಅಧಿಕಾರಿ ತಿಳಿಸಿರುತ್ತಾರೆ.