

ಪ್ರತಿಷ್ಠಿತ ಗ್ರಾಮ ಮಡಪ್ಪಾಡಿ ಆದರೇ ರಸ್ತೆ ಬಗ್ಗೆ ಮಾತ್ರ ಅದೆಷ್ಟೋ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾ ಬಂದಿದೆ. ಸೇವಾಜೆಯಿಂದ ಮಡಪ್ಪಾಡಿಗೆ ಸಾಗುವ ರಸ್ತೆ ಕೆಲವೆ ವರ್ಷಗಳ ಹಿಂದೆ ಮರುಡಾಮರೀಕರಣ ನಡೆದಿದ್ದರೂ ಡಾಮರು ಕಿತ್ತು ಹೋಗಿ ರಸ್ತೆ ಮತ್ತೆ ಅಸ್ತವ್ಯಸ್ತವಾಗಿದೆ ಸೇವಾಜೆಯಿಂದ ಕಜೆವರೆಗಿನ ರಸ್ತೆ ಗುಂಡಿಗಳಿಗೆ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಈ ಮಣ್ಣು ಬೇಸಿಗೆ ಕಾಲವಿಡೀ ಧೂಳಿನ ಮಳೆ ಸುರಿಸುವಂತಾಗಿತ್ತು. ಬೈಕ್ ಸವಾರರು ಈ ರಸ್ತೆಯಲ್ಲಿ ಹೋದರೇ ಸಂಪೂರ್ಣ ಧೂಳುಮಯವಾಗುತ್ತಿದ್ದರು. ಮಾವಿನಕಟ್ಟೆ -ದೇವ- ಮಡಪ್ಪಾಡಿ ರಸ್ತೆಯನ್ನೇ ಬಳಸುವಂತಾಗಿತ್ತು. ಇದೀಗ ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರಿನಿಂದ ತುಂಬಿ ಸಂಚಾರ ಸುಸ್ತರವಾಗಿದೆ. ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್, ಸಚಿವರು, ಸಂಸದರು ಈ ರಸ್ತೆಯ ಬಗ್ಗೆ ಗಮನಹರಿಸಬೇಕೆಂದು ಜನ ಆಗ್ರಹಿಸಿದ್ದಾರೆ.

