ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ಮತ್ತು ಕಲಾಮಾಯೆ ಏನೆಕಲ್ಲು ಪ್ರಸ್ತುತ ಪಡಿಸುವ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ನಲ್ಲಿ ನಡೆಯಲಿದೆ. ಕವಿಗಳಿಗೆ, ಕವನ ವಾಚಕರಿಗೆ ಉಚಿತ ಅವಕಾಶವಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರೆಬಾಸೆ ಘನತೆ ಗೌರವ ಹೆಚ್ಚಿಸುವಂತೆ ಹಾಗೂ ಅತೀ ಹೆಚ್ಚು ವ್ಹೀವ್ಸ್ ಪಡೆದವರಿಗೆ ಕಿರಣ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಕಿರಣ ರಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಯೋಗೀಶ್ ಹೊಸೊಳಿಕೆ ಹಾಗೂ ಕಲಾಮಾಯೆ ಅಧ್ಯಕ್ಷ ಸುಧೀರ್ ಏನೆಕಲ್ಲು ತಿಳಿಸಿದ್ದಾರೆ.
ಕವನ ವಾಚನ ಮತ್ತು ಪದ್ಯ ಹೇಳುವವರಿಗೆ ವಯಸ್ಸಿನ ಮಿತಿಯಿಲ್ಲ. ಗರಿಷ್ಠ ಕಾಲಮಿತಿ 4 ನಿಮಿಷ, ಹಾಡುಗಾರರು ಸ್ವರಚನೆ ಹಾಗೂ ಬೇರೆಯವರ ಬರಹಗಳನ್ನು ಬಳಸಿಕೊಳ್ಳಬಹುದು. ಆದರೇ ರಚನೆಕಾರರ ಹೆಸರನ್ನು ಪ್ರಸ್ತಾಪಿಸಬೇಕು. ಪದ್ಯ ಹೇಳುವವರು ಹಿನ್ನೆಲೆ ಸಂಗೀತ ಬಳಸಬಹುದು. ಸಾಹಿತ್ಯ ಮತ್ತು ದೃಶ್ಯಗಳು ಸ್ಪಷ್ಟವಾಗಿರುವ ವಿಡಿಯೋವನ್ನು ಮೇ 31 ರ ಒಳಗೆ 9686714517, 9449576632 ನಂಬರ್ ಕಳುಹಿಸುವಂತೆ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸೀನಿಯರ್ ಟಿವಿ, ಅಮರ ಸುದ್ದಿ, ಸೋಲಾರ್ ನಿಂತಿಕಲ್ಲು, ಡ್ಯಾನ್ಸ್ ಹೌಸ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ, A2Z ಡ್ಯಾನ್ಸ್ ಸ್ಟುಡಿಯೋ ಸಹಯೋಗ ನೀಡಲಿದೆ.