ಕೊಲ್ಲಮೊಗ್ರ : ಕೊವೀಡ್ -19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಕೊಲ್ಲಮೊಗ್ರ ಗ್ರಾಮದ ಯುವಕರ ತಂಡವೊಂದು ಕೊರೋನ ರೋಗಿಗಳಿಗೆ ಮತ್ತು ಗ್ರಾಮದ ಜನರಿಗೆ ಹಾಗೂ ಪಕ್ಕದ ಗ್ರಾಮದ ಜನರಿಗೆ ಜೌಷಧಿ ಹಾಗೂ ತುರ್ತು ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲು ಸಜ್ಜಾಗಿದೆ. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಸೇವೆಗಳಿಗೆ ಈ ತಂಡ ನೆರವಾಗಿತ್ತು. ಕೊಲ್ಲಮೊಗ್ರ ಗ್ರಾಮದ ಎಸ್.ಕೆ. ಕಾಂಪ್ಲೆಕ್ಸ್ ನಲ್ಲಿ ತುರ್ತು ಕೋವಿಡ್ ಕಾರ್ಯಾಲಯವನ್ನು ತೆರೆಯಲಾಗಿದ್ದು ದಿನದ ಇಪ್ಪತ್ಕಾಲ್ಕು ಗಂಟೆಯು ಕಾರ್ಯಾಲಯ ಸೇವೆಗೆ ಲಭ್ಯವಿದೆ. ಅಗತ್ಯ ವಸ್ತುಗಳನ್ನು ಕಳೆದ ಹದಿನೈದು ದಿನಗಳಿಂದ ಪೂರೈಸುತ್ತಿದ್ದು ಅಗತ್ಯ ವಸ್ತುಗಳು, ಔಷಧಿ, ತುರ್ತು ರಕ್ತದ ಅವಶ್ಯಕತೆ ಇರುವವರು ಹಾಗೂ ರಕ್ತದಾನ ಮಾಡಲಿಚ್ಛಿಸುವವರು ಈ ತಂಡವನ್ನು ಸಂಪರ್ಕಿಸಬಹುದು ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
ಈ ತಂಡದಲ್ಲಿ ಉದಯ ಕೊಪ್ಪಡ್ಕ, ಮಾಧವ ಚಾಂತಾಳ, ಸುರೇಶ್ ಮಿತ್ತಮಜಲು, ಶಶಿಧರ ತೋಟದಮಜಲು, ಗಂಗಾಧರ ಮಿತ್ತೋಡಿ, ಜಗದೀಶ ಅಂಬೆಕಲ್ಲು, ಕೇಶವ ಅಂಬೆಕಲ್ಲು, ಚಲನ್ ಕೊಪ್ಪಡ್ಕ, ರೋಹಿತ್ ಮೊಟ್ಟೆಮನೆ, ಸಚಿತ್ ಶಿವಾಲ, ಹರಿಪ್ರಸಾದ್ ಮಲ್ಲಾಜೆ, ಉದಯ ಶಿವಾಲ, ಗಣೇಶ ಶಿವಾಲ, ನಿಖಿಲ್ ನಿಡುಬೆ ಸಹಕರಿಸಲಿದ್ದಾರೆ.