Ad Widget

ಅಮ್ಮ

ಸಾವಿರ ನದಿಗಳಿಗೆಲ್ಲಾ ಒಂದೇನೆ ಸಾಗರ…
ನೋವನು ಮರೆಸುವ ನೀನು ಪ್ರೀತಿಯ ಆಗರ…
ಕಷ್ಟಗಳ ನುಂಗಿ ಬದುಕೋ ದೇವರ ರೂಪ ನೀನು…
ಮನಸ್ಸು ಎಷ್ಟೇ ನೊಂದರೂ ನಗಿಸಿ ನಗುವ ಗುಣವೂ ನಿನ್ನದು…
ನಿಸ್ವಾರ್ಥದ ಪ್ರೀತಿಗೊಂದು ಹೆಸರು ನೀನೇ “ಅಮ್ಮ”…

. . . . . . .

ಕನಸಲ್ಲೂ ನಿನ್ನನ್ನು ಬಿಟ್ಟು ಬದುಕಲಾರೆನಮ್ಮ…
ನಿನ್ನ ಜೀವ, ನನ್ನ ಜೀವ ಎರಡೂ ಒಂದೇ ಅಮ್ಮ…..
ನಿನ್ನಯ ಪ್ರೀತಿಯು ನನಗೆ ಸ್ಪೂರ್ತಿ ಕೊಡುವುದಮ್ಮ…
ನಿನ್ನ ಬಿಟ್ಟು ನಾನು ಎಂದೂ ಬದುಕಲಾರೆನಮ್ಮ…
ಜಗದಲ್ಲಿ ಬದಲಾಗದ ಪದವೆಂದರೆ “ಅಮ್ಮ”…

ಯಾರೇ ಏನೇ ಅಂದರೂ ನನ್ನ ಜೀವ ನೀನೇ ಅಮ್ಮ…
ಬಿದ್ದರೂ ಹಿಡಿದೆಬ್ಬಿಸುವ ದೇವರ ರೂಪ ಅಮ್ಮ…
ನನಗಾಗಿ ಪ್ರತಿಕ್ಷಣವೂ ಬದುಕುವ ಜೀವ ಅಮ್ಮ…
ನನ್ನುಸಿರ ಕಣಕಣದಲ್ಲೂ ನಿನ್ನಯ ಹೆಸರು ಅಮ್ಮ…
ನನ್ನ ಬದುಕ ಸ್ಪೂರ್ತಿ-ಶಕ್ತಿ ಎಲ್ಲವೂ ನೀನೇ “ಅಮ್ಮ”…

ಎಂದೆಂದಿಗೂ ನನ್ನ ನೀನು ದೂರ ಮಾಡಬೇಡಮ್ಮ…
ಕನಸು-ಮನಸಿನಲ್ಲೂ ನಿನ್ನ ಬಿಟ್ಟು ಬದುಕಲಾರೆನಮ್ಮ…
ಜೀವನದ ಪ್ರತಿಕ್ಷಣವೂ ನಿನಗಾಗಿ ಮೀಸಲಿಡುವೆ…
ನಿನಗಿಂತ ದೊಡ್ಡದಾವುದೂ ನನಗಿಲ್ಲ ಈ ಜಗದಲ್ಲಿ…
ನನಗಾಗಿ ಬದುಕಿದ ಜೀವ ನೀನು ” ಅಮ್ಮ”

ನನ್ನಯ ಮೊದಲ ಗುರುವು ನೀನೇ ಅಮ್ಮ…
ನಾ ಕಲಿತ ಮೊದಲ ಪದವೂ ನೀನೇ ಅಮ್ಮ…
ನಿನ್ನಯ ಜೀವನ ನನಗೆ ಪಾಠವಮ್ಮ…
ನೀ ಪಟ್ಚ ಕಷ್ಟವೇ ನನಗೆ ಸ್ಪೂರ್ತಿ ಅಮ್ಮ…
ಜಗದಲ್ಲಿ ಶಕ್ತಿಶಾಲಿ ಪದವೇ “ಅಮ್ಮ”…

✍ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!