ಲಸಿಕೆ ಕೊರತೆಯಾಗಿರುವ ಕಾರಣದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಾಳೆ(ಮೇ4) ಲಸಿಕಾ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಲಸಿಕಾ ಕಾರ್ಯಕ್ರಮ ನಾಳೆ ಇರುವುದಿಲ್ಲ. ಕೋವಿಡ್ ಲಸಿಕೆ ಬಂದಾಗ ತಿಳಿಸಲಾಗುವುದು ಎಂದು ತಾಲೂಕು ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಪ್ರತಿರೋಧಕವಾಗಿ ನೀಡುವ ಕೋವ್ಯಾಕ್ಸಿನ್ ಕೆಲವು ದಿನಗಳಿಂದ ಲಭ್ಯತೆ ಇರಲಿಲ್ಲ. ಇದು ಎರಡನೇ ಹಂತದಲ್ಲಿ ಲಸಿಕೆ ನೀಡುವುದಕ್ಕೆ ತೀವ್ರ ಸಮಸ್ಯೆ ಎದುರಾಗಿತ್ತು. ಆದರೆ ಕೋವಿಶೀಲ್ಡ್ ಲಸಿಕೆ ಲಭ್ಯತೆ ಇತ್ತು. ಆದರೆ ಇದೀಗ ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಕಾರ್ಯಕ್ರಮ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ.
- Saturday
- November 23rd, 2024