
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಾಮೂಹಿಕ ವಿವಾಹ ಈ ವರ್ಷ ಕೋವಿಡ್ 19 ಕಾರಣದಿಂದಾಗಿ ರದ್ದುಗೊಂಡಿರುತ್ತದೆ. ಈಗಾಗಲೇ ನೋಂದಾವಣೆ ಯಾಗಿರುವ ಜೋಡಿಗಳಿಗೆ ವಿವಾಹ ನಡೆಸಿದ್ದಲ್ಲಿ ಅವರಿಗೆ ಶ್ರೀಕ್ಷೇತ್ರದಿಂದ ಚಿನ್ನದ ತಾಳಿ ದಂಪತಿಗಳಿಗೆ ವಸ್ತ್ರ ಉಡುಗೊರೆ ಹಾಗೂ ಪ್ರತಿ ಜೋಡಿಗೆ ಹತ್ತು ಸಾವಿರದಂತೆ ಸಹಾಯಧನ ನೀಡಲಾಗುತ್ತಿದೆ. ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದ ಬಾಳಿಲ ಒಕ್ಕೂಟದ ಅಯ್ಯನಕಟ್ಟೆ ನಿವಾಸಿಯಾಗಿರುವ ಜನಾರ್ದನ & ಸುಪ್ರಿಯಾ ಹಾಗೂ ಆಶಲತಾ & ದೇವಯ್ಯ ಜೋಡಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಚಿನ್ನದ ತಾಳಿ ದಂಪತಿಗಳಿಗೆ ವಸ್ತ್ರ ಉಡುಗೊರೆ ಹಾಗೂ ಪ್ರತಿ ಜೋಡಿಗೆ ರೂ. 10,000 ದಂತೆ ಧನಸಹಾಯವನ್ನು ಸುಳ್ಯ ಯೋಜನೆಯ ಯೋಜನಾಧಿಕಾರಿ ಚೆನ್ನಕೇಶವ ರವರು ವಿತರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾಗಿರುವ ಶ್ರೀಮತಿ ಸರಸ್ವತಿ ಕಾಮತ್ ,ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೂಸಪ್ಪ ಗೌಡ, ವಲಯ ಮೇಲ್ವಿಚಾರಕ ಮುರಳೀಧರ, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಜಾನಕಿ ಸೇವಾ ಪ್ರತಿನಿಧಿ ಶ್ರೀಮತಿ ಬೇಬಿ ಶಾಲಿನಿ ಉಪಸ್ಥಿತರಿದ್ದರು.