ಕಲಾಮಾಯೆ ಸಾಂಸ್ಕೃತಿಕ ಶಿಕ್ಷಣ ಕೇಂದ್ರ ಏನೆಕಲ್ಲು ಇದರ ಸಾರಥ್ಯದಲ್ಲಿ ಸೋಲಾರ್ ಪಾಯಿಂಟ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ವತಿಯಿಂದ
ಹಾಡು ಬಾ ಕನಸು ಆನ್‌ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ. ಹಾಗೂ 10 ರಿಂದ 18 ವರ್ಷ (ಜೂನಿಯರ್ ವಿಭಾಗ) 18 ವರ್ಷ ಮೇಲ್ಪಟ್ಟು (ಸೀನಿಯರ್ ವಿಭಾಗ)ಈ ಸ್ಪರ್ಧೆ ನಡೆಯಲಿದೆ. ಈ ಗೀತೆಯ ಅವಧಿ ಮೂರು ನಿಮಿಷವಾಗಿದ್ದು ಹಾಡಿನ ಜೊತೆಗೆ ಗೀತೆ ರಚನೆಕಾರರ ಹೆಸರು ಪ್ರಸ್ತಾಪಿಸಬೇಕು. ಗೀತೆಯನ್ನು ಶ್ರುತಿ ಬಳಸಿ ಹಾಡಬೇಕು. (ಟ್ರಾಕ್) ಕರೋಕೆ ಬಳಸುವಂತಿಲ್ಲ. ತೀರ್ಪುಗಾರರ ನಿರ್ಣಯದಂತೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನವನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಸಂಸ್ಥೆಯ ಗೌರವ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ಆಕರ್ಷಕ ಉಡುಗೊರೆಯನ್ನು ಒಳಗೊಂಡಿರುತ್ತದೆ. ಅತೀ ಹೆಚ್ಚು ಲೈಕ್ ಮತ್ತು ವೀವ್ ಪಡೆದ ಸ್ಪರ್ಧಿಯು “ಸೀನಿಯರ್ TV Star of ಹಾಡು ಬಾ ಕನಸು ಪ್ರಶಸ್ತಿಗೆ ಭಾಜನಾರಾಗಲಿದ್ದಾರೆ. ನಿಮ್ಮ ಹಾಡಿನ ಮೊಬೈಲ್ ವೀಡಿಯೋ ತುಣುಕನ್ನು ಮೇ 8 ಶನಿವಾರದ ಒಳಗಾಗಿ ನಮ್ಮ ಈ 9686714517 ವಾಟ್ಸಾಪ್ ನಂಬರಿಗೆ ಕಳುಹಿಸಿ.
ಸೋಲಾರ್ ಪಾಯಿಂಟ್ ನಿಂತಿಕಲ್ಲು, ಬ್ಲ್ಯಾಕ್ ವಿಂಡ್ ಸೋಲಾರ್ ಬೆಳ್ತಂಗಡಿ, ಸೀನಿಯರ್ ಟಿವಿ, ಅಮರ ಸುಳ್ಯ ಸುದ್ದಿ , ಡ್ಯಾನ್ಸ್ ಹೌಸ್ ನಿಂತಿಕಲ್ಲು, ವಾಯ್ಸ್ ಆಪ್ ಆರಾಧನಾ, ಡ್ಯಾನ್ಸ್ ಸ್ಟುಡಿಯೋ ಕಾಣಿಯೂರು ಇವರುಗಳು ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಲಿದ್ದಾರೆ ಎಂದು ಕಲಾಮಾಯೆ ಸಂಸ್ಥೆಯ ನಿರ್ದೇಶಕ ಸುಧೀರ್ ಏನೆಕಲ್ಲು ತಿಳಿಸಿದ್ದಾರೆ.
- Saturday
- November 23rd, 2024