ಸಮುದ್ರಕ್ಕೆ ಈಜಲೆಂದು ಹೋದ ಮೂವರು ನೀರು ಪಾಲಾಗಿ ದುರ್ಮರಣಕ್ಕೀಡಾದ ಘಟನೆ ಎ.26 ರಂದು ಸಂಜೆ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಬೈರಪ್ಪ & ಸಾವಿತ್ರಿ ಎಂಬವರ ಪುತ್ರರಾದ 18 ವರ್ಷ ಪ್ರಾಯದ ಕಾರ್ತಿಕ್ ಮತ್ತು 19 ವರ್ಷ ಪ್ರಾಯದ ಕೀರ್ತನ್ ಹಾಗೂ ಪುತ್ತೂರು ತಾಲೂಕಿನ ನೆಕ್ಕರೆ ಪುಟ್ಟಣ್ಣ ಎಂಬವರ ಸುಮಾರು 17 ವರ್ಷ ಪ್ರಾಯದ ನಿರಂಜನ್ ಎಂಬವರು ಕಾಸರಗೋಡಿನ ಕುಂಬಳೆಯ ತನ್ನ ಸಂಬಂಧಿಕರ ಮದುವೆಗೆಂದು ಹೋಗಿದ್ದರು. ಮದುವೆ ಕಾರ್ಯ ಮುಗಿಸಿ ನಿನ್ನೆ ಸಂಜೆ ವೇಳೆಗೆ ಈ ಮೂವರು ಕುಂಬಳೆ ಬಳಿ ಸಮುದ್ರಕ್ಕೆ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆಂದು ತಿಳಿದು ಬಂದಿದೆ. ಬೈರಪ್ಪರು ವಿಟ್ಲದ ಮಂಚಿಯಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಂದಲೇ ಅವರು ಮದುವೆಗೆ ತೆರಳಿದ್ದರು.