ಎ.14 ರಂದು ನಿಧನರಾದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸ್ಥಾಪಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿದ್ದ ಎ. ವಿ. ಶ್ರೀನಿವಾಸ ರಾವ್ ಅವರಿಗೆ ಇಂದು ಸಹಕಾರಿ ಸಂಘದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಬಗ್ಗೆ ಸಹಕಾರಿ ಸಂಘದ ಅಧ್ಯಕ್ಷರಾದ ಎಂ ದಾಮೋದರ ಗೌಡ ಮತ್ತು ನಿರ್ದೇಶಕರಾದ ಪಿ.ಎಸ್. ಗಂಗಾಧರ ನುಡಿ ನಮನ ಸಲ್ಲಿಸಿದರು. ಸಂಘದ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
- Wednesday
- December 4th, 2024