
ಕರ್ನಾಟಕ ಘನ ಸರಕಾರದ ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ಅಂಗಾರರವರ ಆಪ್ತ ಸಹಾಯಕರಾಗಿ ತೊಡಿಕಾನದ ಸುಧಾಕರ ಎ.ಜಿ. ಇವರನ್ನು ನೇಮಕಗೊಳಿಸಲಾಗಿದೆ. ಇವರು ಸುಮಾರು 14 ವರ್ಷಗಳಿಂದ ಸುಳ್ಯ ಭಾ.ಜ.ಪ. ಕಾರ್ಯಾಲಯದಲ್ಲಿ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿಷ್ಠಾವಂತರೆನಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡ್ಯಡ್ಕ ಶಾಖೆಯ ಶಿಕ್ಷಕರಾಗಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸುಳ್ಯ ತಾಲೂಕು ರೈತ ಮೋರ್ಚಾ ಕಾರ್ಯದರ್ಶಿಯಾಗಿದ್ದಾರೆ.