ಅವಶ್ಯಕತೆ ಇದ್ದರೆ ಲಾಕ್ದೌನ್ ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬಲವಂತವಾಗಿ ನಿರ್ಬಂಧಿಸಿ, ವೈನ್ ಶಾಪ್, ಬಾರ್ ಗಳನ್ನು ತೆರೆದಿಡಲು ಸರ್ಕಾರ ಉತ್ಸಾಹ ತೋರುತ್ತಿರುವುದು ಸಂಶಯಕ್ಕೀಡು ಮಾಡುತ್ತಿದೆ. ಒಂದು ವರ್ಷದ ಹಿಂದೆಯೇ ಹಾಸ್ಪಿಟಲ್ ಕೊರತೆ, ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಸಿಬ್ಬಂದಿ ಕೊರತೆ, ಎಲ್ಲವೂ ಸರಕಾರಕ್ಕೆ ಅರಿವಾಗಿತ್ತು. ಒಂದು ವರ್ಷದ ನಂತರ ಕೋರೋಣ 2ನೇ ಅಲೆ ಆರಂಭವಾಗುವ ವರೆಗೂ ಸರಕಾರ ಏನು ಮಾಡುತ್ತಿತ್ತು? ಕೋಟಿಗಟ್ಟಲೆ ಖರ್ಚು ಮಾಡಿ ಪ್ರತಿಮೆಯನ್ನು ಸ್ಥಾಪಿಸುವ ಹಣಕಾಸು ಶಕ್ತಿ ಸರಕಾರಕ್ಕೆ ಇರುವಾಗ, ತುಂಬಾ ಅವಶ್ಯಕ ಆಕ್ಸಿಜನ್ ಕಿಟ್, ವೆಂಟಿಲೇಟರ್, ಆಸ್ಪತ್ರೆಗಳನ್ನು ಮಾಡಲು ಯಾಕೆ ಸಾಧ್ಯವಾಗಲಿಲ್ಲ ? ಒಂದೇ ರಾತ್ರಿಯಲ್ಲಿ ದೇಶದ ಎಲ್ಲ ಕರೆನ್ಸಿ ಯನ್ನು ಅಮಾನ್ಯ ಮಾಡಲು ಸಾಧ್ಯವಾದರೆ, ಒಂದು ಮಧ್ಯ ರಾತ್ರಿಯಲ್ಲಿ ಪೂರ್ತಿ ಕಾಶ್ಮೀರವನ್ನು ತನ್ನ ಹಿಡಿತದಲ್ಲಿ ಇಟ್ಟಕೊಳ್ಳವಷ್ಟು ತಾಕತ್ತು ಸರಕಾರಕ್ಕೆ ಇರುವಾಗ ಈ ದೇಶದಲ್ಲಿರುವ ಸಾವಿರಾರು ಖಾಸಗಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳನ್ನು ಸರ್ಕಾರ ತಾತ್ಕಾಲಿಕವಾಗಿ ತನ್ನ ಸುಪರ್ದಿಗೆ ಯಾಕೆ ತೆಗೆದುಗೊಳ್ಳಲು ಮುಂದೆ ಬರ್ತಾ ಇಲ್ಲ . ಕೊರೋನ 2ನೇ ಹಂತಕ್ಕೆ ಚಾಲನೆ ನೀಡಿದ್ದು ಕುಂಭ ಮೇಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಲಕ್ಷಗಟ್ಟಲೆ ಜನ ಸೇರುವ ಕುಂಭ ಮೇಳಕ್ಕೆ ಯಾಕೆ ಅವಕಾಶ ಕೊಟ್ಟರು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಎಂಬುದೇ ಪ್ರಶ್ನೆಯಾಗಿದೆ.
ಆಶ್ರಫ್ ಟರ್ಲಿ, SDPI ಸಂಪಾಜೆ