ಕರ್ನಾಟಕ ಸರಕಾರದ ಬಹುದೊಡ್ಡ ಯೋಜನೆಯಲ್ಲೊಂದಾದ ಕೋವಿಡ್ 19 ಲಸಿಕಾ ಕಾರ್ಯಕ್ರಮ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ನೀಡುತ್ತಾ ಬಂದಿದೆ.ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸರಕಾರ ಆದೇಶ ನೀಡಿದ್ದು,ಇದು ರಕ್ತದಾನಿಗಳ ಮೇಲೆ ಪರಿಣಾಮ ಬೀರುವುದಂತೂ ಅಲ್ಲಗಳೆಯುವಂತಿಲ್ಲ.
ವೈದ್ಯರ ಪ್ರಕಾರ ಕೋವಿಡ್ ಲಸಿಕೆ ಪಡಕೊಂಡವರು ಸುಮಾರು 60 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ,ಈ ಅವಧಿಯಲ್ಲಿ ರಕ್ತದ ಕೊರತೆ ಎದುರಾಗಲಿದ್ದು ಪರ್ಯಾಯ ಮಾರ್ಗ ಹುಡುಕುವತ್ತ ರಕ್ತನಿಧಿಗಳ ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಅತೀ ಹೆಚ್ಚು ರಕ್ತದಾನ ಮಾಡುವ 18 ರಿಂದ 45 ವರ್ಷ ಪ್ರಾಯದ ಜನರಿಗೆ ಕೋವಿಡ್ ಲಸಿಕೆ ಹಾಕಿದಾಗ ರಕ್ತನಿದಿಗಳು ಖಾಲಿಯಾಗಿ ಅದು ನೇರವಾಗಿ ರೋಗಿಗಳ ಮೇಲೆ ಪ್ರಭಾವ ಬೀರುವುದಂತೂ ಸತ್ಯ.
ನಾವೇನು ಮಾಡಬಹುದು ?
ಕೋವಿಡ್ ಲಸಿಕೆ ಪಡೆಯುವುದಕ್ಕೆ ಮುಂಚಿತವಾಗಿ ರಕ್ತದಾನ ಮಾಡಿ ಸಹಕರಿಸುವುದು.
ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ SKSSF ವಿಖಾಯ ರಕ್ತದಾನಿ ಬಳಗ ಸಾರ್ವಜನಿಕರಿಗೆ ರಕ್ತದಾನ ಮಾಡಲು ವೇದಿಕೆ ಒಡಗಿಸಿಕೊಡಲು ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ.
ಜಿಲ್ಲೆಯ ಎಲ್ಲ ರಕ್ತನಿಧಿಗಳ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕ ವಿಟ್ಟುಕ್ಕೊಂಡು ವಿಖಾಯ ರಕ್ತದಾನಿ ಬಳಗವು 2ನೇ ಬಾರಿಗೆ ಜಿಲ್ಲೆಯಲ್ಲಿ ರಕ್ತದಾನ ಅಭಿಯಾನ ನಡೆಸಲು ಸಿದ್ಧತೆ ಮಾಡಿಕ್ಕೊಂಡಿದೆ.
ನಾವು ಕೋವಿಡ್ ಲಸಿಕೆ ಹಾಕಿಕೊಳ್ಳುವ ಮೊದಲು ರಕ್ತದಾನ ಮಾಡೋಣ.
ಜಿಲ್ಲೆಯ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳೋಣ.
ರೋಗಿಗಳ ಪಾಲಿನ ನಿಜವಾದ ಹೀರೋಗಳಾಗೋಣ
——ತಾಜುದ್ದೀನ್ ಟರ್ಲಿ SKSSF ವಿಖಾಯ ರಕ್ತದಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆ.