“ಕೊರೋನಾ” ಈ ಭೀಕರ ಕಾಯಿಲೆಯು ಜಗತ್ತಿನಾದ್ಯಂತ ವ್ಯಾಪಿಸಿದೆ ಹಾಗೂ ವ್ಯಾಪಿಸುತ್ತಿದೆ. ನಮ್ಮ ಭಾರತ ದೇಶವೂ ಈ ಮಹಾಮಾರಿಗೆ ಹೊರತಾಗಿಲ್ಲ. ಭಾರತದಲ್ಲಿ ಈ ಕೊರೋನಾ ದ ಮೊದಲನೆಯ ಅಲೆ ಲಕ್ಷಾಂತರ ಜನರಿಗೆ ವಕ್ಕರಿಸಿತ್ತು. ಆದರೆ ಈಗ ಇದೇ ಕೊರೋನಾ ದ ಎರಡನೇಯ ಅಲೆ ಬಂದಿದ್ದು ಈ ಎರಡನೆಯ ಅಲೆ ಮೊದಲನೆಯ ಅಲೆಗಿಂತ ಹೆಚ್ಚು ಬಲಿಷ್ಠವಾಗಿದ್ದು ನಮ್ಮ ರಾಜ್ಯವಾದ ಕರ್ನಾಟಕದಲ್ಲಿಯೇ ದಿನವೊಂದಕ್ಕೆ ಸುಮಾರು 20,000 ಕ್ಕೂ ಮಿಕ್ಕಿ ಕೊರೋನಾ ಪಾಸಿಟಿವ್ ಬರುತ್ತಿದ್ದು ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಸರ್ಕಾರ ಈಗ ಈ ಕೊರೋನಾ ಎರಡನೆಯ ಅಲೆಯ ಆರ್ಭಟವನ್ನು ಕಡಿಮೆ ಮಾಡಿ ಅದರ ನಿಯಂತ್ರಣಕ್ಕಾಗಿ ಸೋಮವಾರದಿಂದ ಶುಕ್ರವಾರದವರೆಗೆ “ನೈಟ್ ಕರ್ಫ್ಯೂ” ಹಾಗೂ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆಯ ವರೆಗೆ “ವೀಕೆಂಡ್ ಕರ್ಫ್ಯೂ” ಘೋಷಿಸಿದೆ. ಸರಕಾರದ ಈ ನಿರ್ಧಾರ ಸ್ವಾಗತಾರ್ಹ ಏಕೆಂದರೆ ಈ ಕೊರೋನಾ ಮಹಾಮಾರಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ ಹಾಗೂ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಿದೆ. ಕೊರೋನಾವು ಜನರಿಂದ ಜನರಿಗೆ ಹರಡುವ ಕಾಯಿಲೆ ಆಗಿರುವ ಕಾರಣದಿಂದ ಸರ್ಕಾರ ಜನರು ಗುಂಪುಗೂಡುವುದನ್ನು ನಿಷೇಧಿಸಿದೆ. ಏಕೆಂದರೆ ಜನರು ಹೆಚ್ಚು ಹೆಚ್ಚು ಗುಂಪುಗೂಡಿದರೆ ಅಲ್ಲಿ ಕೊರೋನಾ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ ಆದ್ದರಿಂದ ಜನರು ಆದಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಕಿಕೊಂಡು ತಮ್ಮ ತಮ್ಮ ರಕ್ಷಣೆಯನ್ನು ತಾವುಗಳೇ ಮಾಡಿಕೊಂಡು ಈ ಭೀಕರ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಿ ಈ ಮಹಾಮಾರಿಯನ್ನು ಭಾರತದಿಂದ ಸಂಪೂರ್ಣವಾಗಿ ಓಡಿಸುವ ಪ್ರಯತ್ನ ಮಾಡೋಣ. ಭಾರತದಿಂದ ಮಾತ್ರವಲ್ಲ ಇಡೀ ಜಗತ್ತಿನಿಂದಲೇ ಈ ಕೊರೋನಾ ಮಹಾಮಾರಿಯನ್ನು ಓಡಿಸಲು ಪ್ರಯತ್ನಿಸೋಣ.
✍ಉಲ್ಲಾಸ್ ಕಜ್ಜೋಡಿ