ಕೇನ್ಯ ಗ್ರಾಮದ ಕೆಮ್ಮಟೆ ಎಂಬಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸುಳ್ಯ ವಲಯ ಅಬಕಾರಿ ನಿರೀಕ್ಷಕರು ದಾಳಿ ನಡೆಸಿದ್ದಾರೆ. ಈ ವೇಳೆ 10 ಬಾಟಲಿಗಳಲ್ಲಿ ಸಂಗ್ರಹಿಸಿದ್ದ 10 ಲೀ ಗೇರು ಹಣ್ಣಿನಿಂದ ತಯಾರಿಸಿದ ಸರಾಯಿ ಪತ್ತೆಯಾಗಿದ್ದು, ದಾಳಿ ವೇಳೆ ಆರೋಪಿ ಕೆಮ್ಮಟೆ ಸುಂದರ ಗೌಡ ಪರಾರಿಯಾದರೆಂದು ತಿಳಿದುಬಂದಿದೆ. ಅಬಕಾರಿ ನಿರೀಕ್ಷಕ ಸಿದ್ದಪ್ಪ ಮೇಟಿ, ಹಾಗೂ ಸಿಬ್ಬಂದಿಗಳಾದ ಮಲ್ಲಣ್ಣ ಗೌಡ, ರಘುನಾಥ ಬಜಂತ್ರಿ, ಅಶೋಕ್, ಶರಣಪ್ಪ ಕಾರ್ಯಚರಣೆ ನಡೆಸಿದ್ದರು.
- Thursday
- November 21st, 2024