ಕೊರೋನಾ ಸೋಂಕಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ನಿರ್ಲಕ್ಷ ವಹಿಸಿವೆ. ಕೊರೊನಾಗೆ ಸಂಬಂಧಪಟ್ಟ ನಿಯಮಗಳು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದು ಕ್ರಿಯೆಯಲ್ಲಿ ಇಲ್ಲ ಎಂದು ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ನಗರ ಹಾಗೂ ಹಳ್ಳಿಗಳಲ್ಲಿ ಕೆಲವೆಡೆ ಇನ್ನೂ ಕೊರೊನಾದ ಗಂಭೀರತೆ ಅರ್ಥವಾಗಿಲ್ಲ. ಕಠಿಣ ಕ್ರಮ ಅನುಸರಿಸಬೇಕಾದ ಅಧಿಕಾರಿಗಳೂ ಕೈ ಕಟ್ಟಿ ಕುಳಿತಿರುವುದೂ ಸೋಂಕಿನ ತೀವ್ರತೆಗೆ ಕಾರಣ ಎಂದಿದ್ದಾರೆ.
ಸ್ಥಳಿಯ ಆಡಳಿತಕ್ಕೆ ಅಧಿಕಾರ ಕೊಡಲಿ:
ಸೋಂಕಿನ ತೀವ್ರತೆ ಹೋಗಲಾಡಿಸಲು ಮೇಲ್ಮಟ್ಟದಲ್ಲಿ ಕಷ್ಟವಾದರೆ ಸ್ಥಳೀಯ ಆಡಳಿತಗಳಿಗೂ ಅಧಿಕಾರ ನೀಡಲಿ. ಅವರೂ ಕಟ್ಟು ನಿಟ್ಟಾದ ಕ್ರಮ ಕೈಗೊಂಡರೆ ಕೊರೊನಾ ನಿಯಂತ್ರಣ ಸಾಧ್ಯ ಎಂದು ಸಲಹೆ ನೀಡಿದ್ದಾರೆ.