ಗುತ್ತಿಗಾರು ವಲಯದ ನಾಲ್ಕೂರು ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಐತಿಹಾಸಿಕ ಹಿನ್ನೆಲೆಯುಳ್ಳ ಚಿಲ್ತಡ್ಕ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಬದಿಗುಂಡಿಯ ಶುಚಿತ್ವ ಕೆಲಸವನ್ನು ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಡೆಸಲಾಯಿತು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗ್ರಾಮಕ್ಕೆ ಸಂಬಂಧಪಟ್ಟ ಚಿಲ್ತಡ್ಕ ದೈವಸ್ಥಾನವು ಊರ ಪರವೂರ ಭಕ್ತರ ಸಹಕಾರದಿಂದ ಜೀರ್ಣೋದ್ಧಾರಗೊಂಡಿದ್ದು ಬ್ರಹ್ಮಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವಕ್ಕೆ ದಿನ ನಿಗದಿಯಾಗಿದ್ದು, ದೈವಗಳ ಬದಿಗುಂಡಿಯ ಸ್ವಚ್ಚತೆ ಅಗತ್ಯವಾಗಿದ್ದು, ಇದನ್ನು ಗಮನಿಸಿದ ಗುತ್ತಿಗಾರು ವಲಯದ ನಾಲ್ಕೂರು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಚಿಲ್ತಡ್ಕ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಬದಿಗುಂಡಿಯ ಸ್ವಚ್ಚತಾ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಸಂಯೋಜಕರಾದ ಸತೀಶ್ ಹಾಲೆಮಜಲು ಹಾಗೂ ಸ್ವಯಂಸೇವಕರಾದ ಕರುಣಾಕರ, ಲೋಹಿತ್ ಚೆಮ್ನೂರ್, ಧನಂಜಯ, ಜಯಂತ, ದೀಪಕ್, ಮೋಹನ್ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಸ್ವಚ್ಛತಾ ಕಾರ್ಯಕ್ಕೆ ದಿನೇಶ್ ಹಾಲೆಮಜಲು ಅವರು ಅಗತ್ಯ ಸಲಕರಣೆಗಳನ್ನು ಒದಗಿಸಿದರು. ಹಾಗೂ ಕೇಶವ ಚಿಲ್ತಡ್ಕ ಇವರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಉಪಹಾರದ ವ್ಯವಸ್ಥೆ ಮಾಡಿದರು.
✍ವರದಿ:-ಉಲ್ಲಾಸ್ ಕಜ್ಜೋಡಿ