
ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ ವಿಶ್ವ ಜ್ಞಾನಯೋಗಿ,ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಮೇಶ್.ಎಸ್ ವಹಿಸಿದ್ದರು ಕಾರ್ಯಕ್ರಮದ ಔಚಿತ್ಯದ ಕುರಿತು ಪ್ರಾಧ್ಯಾಪಕ ಕಿಶೋರ್ ಕುಮಾರ್ ಕಿರ್ಲಾಯ ಮಾತನಾಡಿದರು ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಎಂ.ಕೆ.ಸೀತಾರಾಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.