ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ವಾರ್ಷಿಕ ಜಾತ್ರೋತ್ಸವ ಎ.12 ಹಾಗೂ 13ರಂದು ನಡೆಯಿತು. ಎ.12 ಸೋಮವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಹರಕೆಯ ಶ್ರೀ ಧೂಮಾವತೀ ನೇಮೋತ್ಸವ ಜರುಗಿತು. ರಾತ್ರಿ ಗಂಟೆ 8.00ರಿಂದ ಶ್ರೀ ಮುಕಾಂಬಿ (ಅಗ್ನಿ) ಗುಳಿಗ ಮತ್ತು ಪರಿವಾರ ಗುಳಿಗಗಳಿಗೆ ನೇಮೋತ್ಸವ ನೆರವೇರಿತು. ಎ.13 ಮಂಗಳವಾರದಂದು ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ಶ್ರೀ ಧೂಮಾವತೀ ದೈವದ ಮಹಾನಡಾವಳಿ ಹಾಗೂ ಕೊರತಿ ದೈವದ ನೇಮೋತ್ಸವ ನಡೆಯುವುದರೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಅಣ್ಣಾ ವಿನಯಚಂದ್ರ ಮತ್ತು ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.