
ಕಮಿಲದ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದಲ್ಲಿ ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ಸೋಮವಾರ ನಡೆಯಿತು. ಬೆಳಗ್ಗೆ ಶ್ರೀ ರಕ್ತೇಶ್ವರೀ ಹಾಗೂ ಗುಳಿಗಳ ದೈವಗಳ ನೇಮ ನಡೆಯಿತು. ಈ ಸಂದರ್ಭ ಶ್ರೀ ರಕ್ತೇಶ್ವರೀ ಮತ್ತು ಗುಳಿಗ ಸಾನ್ನಿಧ್ಯದ ಆಡಳಿತ ಮೊಕ್ತೇಸರ ಗುರುರಾಜ ಭಟ್ ಪುಚ್ಚಪ್ಪಾಡಿ, ಆಡಳಿತ ಸಮಿತಿ ಅಧ್ಯಕ್ಷ ಕೆ ಎಸ್ ಶೂರಪ್ಪ ಕೊಂದಾಳ, ಕಾರ್ಯದರ್ಶಿ ಶಿವಪ್ರಸಾದ್ ಕಮಿಲ, ಖಜಾಂಜಿ ಭಾಗ್ಯಲಕ್ಷ್ಮಿ ಕಾಂತಿಲ, ದೈವಗಳ ಪೂಜಾರಿಗಳಾದ ಕೇಶವ ಕಾಂತಿಲ, ಹುಕ್ರಪ್ಪ ನಿಡ್ಡಾಜೆ, ಕಿರಣ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.ಊರಿನ ಹಾಗೂ ಪರವೂರಿನ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿದರು.