Ad Widget

ಹೊಸ ವರುಷ ತರಲಿ ಹರುಷ……


‘ಋತೂನಾಂ ಕುಸುಮಾಕರಂ’ ಎಂದು ಗೀತಾಚಾರ್ಯರು ಹೇಳುವಂತೆ ಋತುರಾಜ ವಸಂತದ ಶುಭಾಗಮನದ ದಿನವೇ ಯುಗಾದಿ. ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಆ ದಿನ ಮನೆಯ ಗೋಡೆಯ ಮೇಲೆ ಮಾತ್ರ ಕ್ಯಾಲೆಂಡರ್ ಸಂಪೂರ್ಣವಾಗಿ ಬದಲಾಗಿರುತ್ತದೆ ವಿನಃ ನಮ್ಮ ಜೀವನದಲ್ಲಿ ನಮಗೆ ಹೊಸ ದಿನ ಎಂದರೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷ ಎಂದರೆ ಯುಗಾದಿ. ಯುಗಾದಿ ಚೈತ್ರ ಮಾಸದ ಮೊದಲನೆಯ ದಿನ. ಇಂದಿನ ದಿನದಿಂದ ವಸಂತ ಪ್ರಾರಂಭವಾಗಿ ತರುಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಎಲ್ಲೆಡೆ ತನ್ನ ಪರಿಮಳವನ್ನು ಬೀರುತ್ತವೆ.
ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳು ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗಳಾಗುತ್ತದೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಗತಿಯನ್ನಾಧರಿಸಿ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ನಮ್ಮ ರಾಜ್ಯದಲ್ಲಿ ಚಂದ್ರಮಾನ ಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿದೆ. ನಮ್ಮ ದೇಶದಲ್ಲಿ ಹಬ್ಬ ಹರಿದಿನಗಳು ನಮ್ಮ ಬದುಕಿನ ಸಂತಸದಲ್ಲಿ ಹಾಸು ಹೊಕ್ಕಾಗಿವೆ. ಸಮಾಜದಲ್ಲಿ ಪ್ರತಿಯೊಬ್ಬರ ಜೀವನವೂ ಸುಖ- ದುಃಖಗಳು, ಸಿಹಿ-ಕಹಿಗಳು, ಸೋಲು-ಗೆಲುವುಗಳು, ನಗು-ಅಳು, ರಾತ್ರಿ-ಹಗಲುಗಳೊಂದಿಗೆ ಬಾಳುತ್ತಾ ಬಂದಿದೆ.

. . . . .


ಇಂದು ನಾವು ಕೊರೋನಾ ವೈರಸ್ ಭೀತಿಯಲ್ಲಿದ್ದೇವೆ. ಹಾಗಾಗಿ ಸರಳ ಯುಗಾದಿ ಆಚರಣೆಗೆ ಮಹತ್ವವನ್ನು ಕೊಡಬೇಕಾದುದು ನಮ್ಮ ಕರ್ತವ್ಯ. ಈ ವರ್ಷದ ಯುಗಾದಿ ಹಬ್ಬದಲ್ಲಿ ಖುಷಿಯ ಬೆಲ್ಲಕ್ಕಿಂತ ಕೋರೋನಾ ವೈರಸ್ ಎಂಬ ಬೇವು ಜಾಸ್ತಿ ಇದೆ. ಈ ಯುಗಾದಿ ಹೊಸತನಕ್ಕೆ ಮುನ್ನುಡಿಯಾಗಲಿ. ಬದುಕು ನವೀಕರಣಗೊಳ್ಳಲಿ, ನಲಿವು ನಿರಂತರವಾಗಿರಲಿ………

📝ಅಕ್ಷತಾ ಕೇಶವ್ ಕಡ್ಯದ
ಶಿಕ್ಷಕಿ, ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ, ಮಂಗಳೂರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!