Ad Widget

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದಿಂದ ಸೇತುವೆಗೆ ಅಡ್ಡಲಾಗಿದ್ದ ಮರಗಳ ತೆರವು


ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಎ.𝟏𝟎ರಂದು ಹರಿಹರ-ಐನೆಕಿದು ರಸ್ತೆಯ ಗುಂಡಡ್ಕ ಸೇತುವೆಗೆ ಸಿಲುಕಿದ್ದ ಕಸ-ಕಡ್ಡಿ ಹಾಗೂ ಮರಗಳನ್ನು ತೆರವುಗೊಳಿಸಲಾಯಿತು.
ನಂತರ ಹರಿಹರ ಪಲ್ಲತ್ತಡ್ಕ ಮುಖ್ಯ ಪೇಟೆಯಲ್ಲಿರುವ ಸೇತುವೆಗೆ ಅಡ್ಡಲಾಗಿ ಸಿಲುಕಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ- ಸತೀಶ್.ಟಿ.ಎನ್., ಮಣಿಕಂಠ ಹಾಗೂ ಸ್ವಯಂಸೇವಕರಾದ ಜಯಪ್ರಕಾಶ್, ಲಕ್ಷ್ಮಣ, ಚಂದ್ರಶೇಖರ ಕೋನಡ್ಕ, ಅಶೋಕ ಮಿತ್ತೋಡಿ, ಹರ್ಷ, ಕುಶಾಲಪ್ಪ, ಸದಾಶಿವ, ಯಶವಂತ, ಬಾಲಸುಬ್ರಮಣ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಯಂಸೇವಕರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಸ್ವಯಂ ಸೇವಕ ತಂಡದ ಸದಸ್ಯರಾದ ಜಯಪ್ರಕಾಶ್ ಹಾಗೂ ಬಾಲಸುಬ್ರಮಣ್ಯ, ಊಟದ ವ್ಯವಸ್ಥೆಯನ್ನು ಶ್ರೀ ಹರಿಹರೇಶ್ವರ ದೇವಸ್ಥಾನ, ತಂಪುಪಾನಿಯದ ವ್ಯವಸ್ಥೆಯನ್ನು ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಹೋಟೆಲ್ ಮಾಲಕ ರಾಜೇಶ್ ಪರಮಲೆ, ಚಾ-ತಿಂಡಿಯ ವ್ಯವಸ್ಥೆಯನ್ನು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ವಿಜಯ ಅಂಗಣ ನೀಡಿದರು.

. . . . .

✍ವರದಿ:-ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!