ಎನ್ ಎಸ್ ಯು ಐ 50 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಧ್ವಜಾರೋಹಣವನು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘದಲ್ಲಿ ಕಾರ್ಯನಿರ್ವಹಿಸಿದರು ಹಲವು ಜನ ನಾಯಕರಾಗಿ, ಶಾಸಕರಾಗಿ , ಸಂಸದರಾಗಿ ಹಲವು ರಾಜ್ಯದ ಮುಖ್ಯಮಂತ್ರಿಗಳಾಗಿ ಹೊರ ಹೊಮ್ಮಿದವರಿದ್ದಾರೆ. ಹೀಗೆ ಎನ್ ಎಸ್ ಯು ಐ ಇನ್ನಷ್ಟು ಕಾರ್ಯಕರ್ತರು ನಮ್ಮ ದೇಶದ ನಾಯಕರಾಗಿ ಹೊರಹೊಮ್ಮಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಶಿಧರ್ ಎಂ.ಜೆ, ಭವಾನಿಶಂಕರ್ ಕಲ್ಮಡ್ಕ , ರಂಜಿತ್ ರೈ, ಚೇತನ್ ಕಜೆಗದ್ದೆ, ರಕ್ಷಿತ್ ಕುಳ್ಳಾಜೆ, ದಿವಾನ್ ಬಳ್ಪ, ಹೇಮಂತ್ ಬಾಳುಗೋಡು, ಉಪಸ್ಥಿತರಿದ್ದರು.
ಯಶವಂತ್ ತೊಡಿಕಾನ ಸ್ವಾಗತಿಸಿ, ಪವನ್ ಅಂಬೆಕಲ್ಲು ವಂದಿಸಿದರು.
- Saturday
- November 23rd, 2024