
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸಜ್ಜನ ಸಭಾಂಗಣ ಮೈದಾನ ಗೂನಡ್ಕ(ಸಂಪಾಜೆ)ದಲ್ಲಿ ನಿಗದಿತ ತಂಡಗಳ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವು ಏ.4 ಭಾನುವಾರ ಜರುಗಿತು.
ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷರು , ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ, ಪಂದ್ಯಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ ಹಮೀದ್, ಬಿಜೆಎಂ ಗೂನಡ್ಕ ಇದರ ಅಧ್ಯಕ್ಷರಾದ ಹಾಜಿ ಉಮ್ಮರ್ ಪಿ.ಎ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿ ಪಿ.ಕೆ, ನಿವೃತ್ತ ಅಧ್ಯಾಪಕರಾದ ಶ್ರೀ ಚಿದಾನಂದ ಮಾಸ್ತರ್, ಮಾರುತಿ ಇಲೆಕ್ಟ್ರಿಕಲ್ಸ್ ಮಾಲಕರಾದ ಗುರುಪ್ರಸಾದ್ ಬಿ.ಕೆ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ನಿಗದಿತ 24 ತಂಡಗಳು ಭಾಗವಹಿಸಿತು. ಫ್ಯಾಬ್ಝೋ ಸವಣೂರು ಸಜ್ಜನ ಟ್ರೋಫಿ-2021 ಟೈಟಲ್ ವಿನ್ನರ್ ಆಗಿ ಹೊರಮ್ಮಿತು, ಹಾಗೂ ಕೆ.ಎಫ್.ಸಿ ಸುಳ್ಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಅಧ್ಯಕ್ಷರಾದ ಡಾ ಉಮ್ಮರ್ ಬೀಜದಕಟ್ಟೆಯವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ್ಞ ಗೂನಡ್ಕ , ವರ್ತಕರ ಸಂಘ ಕಲ್ಲುಗುಂಡಿ ಇದರ ಅಧ್ಯಕ್ಷರಾದ ಯು.ಬಿ ಚಕ್ರಪಾಣಿ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಕೆ ಹನೀಫ್, ಕೇದ್ರೀಯ ಮೀಸಲು ಪೊಲೀಸ್ ಪಡೆಯ ಸಬ್ ಇನ್ಸ್ಪೆಕ್ಟರ್ ಅನ್ವರ್ ಪಿ.ಎಂ , ವಿಖಾಯ ಬಳಗದ ಸದಸ್ಯರಾದ ತಾಜುದ್ದೀನ್ ಟರ್ಲಿ , ಯುವ ಪತ್ರಕರ್ತರು ಹಾಗು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ ಹಾಗು ಕೆ.ಎಂ.ಸಿ.ಸಿ ಬೆಂಗಳೂರು ಇದರ ನಿರ್ದೇಶಕರಾದ ಸಲೀಂ ಟರ್ಲಿ ಮೊದಲಾದವರು ಉಪಸ್ಥಿತರಿದ್ದರು.
ಸಜ್ಜನ ಟ್ರೋಫಿ 2021 ರ ವಿಜಯಿ ತಂಡವಾದ ಫ್ಯಾಬ್ಝೋ ಸವಣೂರು ತಂಡಕ್ಕೆ ₹ 15.000 ಹಾಗು ಟ್ರೋಫಿಯನ್ನು ಮಹಮ್ಮದ್ ಕುಂಞ್ಞ ಗೂನಡ್ಕರವರು ವಿತರಿಸಿದರು.
ದ್ವಿತೀಯ ಸ್ಥಾನ ಪಡೆದ ಕೆ.ಎಫ್.ಸಿ ಸುಳ್ಯ ತಂಡಕ್ಕೆ ಸಜ್ಜನ ಟ್ರೋಫಿ ಹಾಗು 10.000 ರೂಪಾಯಿಗಳನ್ನು ಯು.ಬಿ.ಚಕ್ರಪಾಣಿಯವರು ವಿತರಿಸಿದರು. ಖ್ಯಾತ ವೀಕ್ಷಕ ವಿವರಣೆಗಾರರಾದ ರಮೇಶ್ ಬೆಳ್ಳಾರೆಯವರು ಕಾರ್ಯಕ್ರಮ ನಿರೂಪಿಸಿದರು.ರಹೀಂ ಬೀಜದಕಟ್ಟೆಯವರು ಸ್ವಾಗತಿಸಿ, ವಹಾಬ್ ಅಡಿಮಾರಡ್ಕರವರು ವಂದಿಸಿದರು.