
ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ನಡಾವಳಿಯು ಎ.12 ಹಾಗೂ ಎ.13 ರಂದು ನಡೆಯಲಿದೆ. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.12 ಸೋಮವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ಶ್ರೀ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಸೇವಾರ್ಥವಾಗಿ ಹರಕೆಯ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8.00ರಿಂದ ಶ್ರೀ ಮೂಕಾಂಬಿ (ಅಗ್ನಿ) ಗುಳಿಗ ಮತ್ತು ಪರಿವಾರ ಗುಳಿಗಗಳ ನೇಮೋತ್ಸವ ಜರುಗಲಿದೆ. ಎ.13 ಮಂಗಳವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ಶ್ರೀ ಧೂಮಾವತೀ ದೈವದ ಮಹಾ ನಡಾವಳಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸುವಂತೆ ಕಿಲಂಗೋಡಿ ಅಣ್ಣಾ ವಿನಯಚಂದ್ರ ಮತ್ತು ಕುಟುಂಬಸ್ಥರು ವಿನಂತಿಸಿದ್ದಾರೆ.