ಈಗಾಗಲೇ ದೇಶಾದ್ಯಂತ ಕೊರೊನಾ ವೈರಸ್ ನ 2ನೇ ಅಲೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲೂ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಈ ವೈರಾಣುವಿನ ವಿರುದ್ದ ಹೋರಾಡಲು ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಮುಂದುವರೆದು ಇದೇ ಬರುವ ಎ.7 ನೇ ಬುಧವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4 ಗಂಟೆಯವರೆಗೆ ಕಳಂಜ ಗ್ರಾಮ ಪಂಚಾಯತ್ ನ ಗೌರಿ ಸಭಾಂಗಣದಲ್ಲಿ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೊರೊನಾ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಸದ್ರಿ ಲಸಿಕೆ ಪಡೆಯಲು ಬರುವಾಗ ಕಡ್ಡಾಯವಾಗಿ ಆಧಾರ್ ಪ್ರತಿ, ಮತ್ತು ಮೊಬೈಲ್ ನ್ನು ತರುವಂತೆ ಸೂಚಿಸಲಾಗಿದೆ. ಲಸಿಕೆಯನ್ನು ಪಡೆದರೆ ಅಡ್ಡ ಪರಿಣಾಮಗಳಾಗುತ್ತವೆ ಎನ್ನುವ ವದಂತಿಗೆ ಕಿವಿಗೊಡದೆ ಕೊರೊನಾ ವೈರಸ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಲಸಿಕೆಯನ್ನು ಪಡೆದುಕೊಳ್ಳುವಂತೆ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ.ಕೆ.ಸಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686916963 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಈ ಮೂಲಕ ತಿಳಿಸಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಳಕಂಡ ಜನವಸತಿ ಪ್ರದೇಶಗಳಿಂದ ಮತ್ತು ಸೂಚಿಸಿದ ಸಮಯದಲ್ಲಿ ಲಸಿಕೆಯನ್ನು ಪಡೆಯಲು ಪಂಚಾಯತಿಗೆ ಬರಲು ಕಳಂಜ ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿಯ ವತಿಯಿಂದ ವಾಹನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದು ಲಸಿಕೆಯನ್ನು ಹಾಕಿಸಿಕೊಂಡು ಕೊರೊನ ಮುಕ್ತ ಕಳಂಜವನ್ನಾಗಿ ಮಾಡಲು ಈ ಮೂಲಕ ವಿನಂತಿಸಿದೆ. ವಾಹನದ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾ ಪಂ ನ ಅಧ್ಯಕ್ಷರು/ಉಪಾಧ್ಯಕ್ಷರು/ವಾರ್ಡ್ ಸದಸ್ಯರನ್ನು ಸಂಪರ್ಕಿಸುವಂತೆ ತಿಳಿಸಿದೆ.
ವಾಹನ ವ್ಯವಸ್ಥೆ ವಿವರ
9.30 : ಕಿಲಂಗೋಡಿ
10.30: ತಂಬಿನಮಕ್ಕಿ
11.30: ಕಳಂಜ ಜನತಾ ಕಾಲನಿ
12.30: ಮಣಿಮಜಲು
1.30: ಸೂರೆಂಗಿ
2.30: ಕೋಟೆ ಮುಂಡುಗಾರು-ತಂಟೆಪ್ಪಾಡಿ
3.30: ವಾರಣಾಸಿ.