ಗುತ್ತಿಗಾರು ಪೇಟೆಯಲ್ಲಿ ಮೆಸ್ಕಾಂ ಭೂಗತ ಕೇಬಲ್ ಅಳವಡಿಸುತ್ತಿದ್ದು ಎ.3 ರಂದು ಪೈಪ್ ಒಡೆದು ಹಾಕಿ ಪೇಟೆಯಾದ್ಯಂತ ನೀರಿನ ಸಂಪರ್ಕ ಕಡಿತಗೊಂಡಿದ್ದು ನೀರಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಪಂಚಾಯತ್ ಆಗಲಿ & ಕೇಬಲ್ ಅಳವಡಿಸುತ್ತಿರುವ ಗುತ್ತಿಗೆದಾರರಾಗಲಿ ಸರಿ ಪಡಿಸದೇ ಪೇಟೆಯಾದ್ಯಂತ ನೀರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ಜನಪ್ರತಿನಿಧಿಗಳಾದರೂ ಕುಡಿಯುವ ನೀರಿಗೆ ಪರ್ಯಾಯ ಮಾಡುವರೇ ಎಂದು ಜನ ಕಾಯವ ಪರಿಸ್ಥಿತಿ ಬಂದಿದೆ.
ಪರ್ಯಾಯ ವ್ಯವಸ್ಥೆಗೆ ಕ್ರಮ : ಪಿಡಿಓ
ಕೇಬಲ್ ಅಳವಡಿಸುವ ಗುತ್ತಿಗೆದಾರರಿಗೆ ಪೈಪ್ ಸರಿಪಡಿಸಲು ಸೂಚಿಸಿದ್ದೇವೆ, ಕೆಲಸ ಮುಗಿಯುವ ವರೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಪಿಡಿಓ ಶ್ಯಾಮ್ ಪ್ರಸಾದ್ ತಿಳಿಸಿದ್ದಾರೆ.