ಗುತ್ತಿಗಾರು : ತಾಂತ್ರಿಕ ಅಡಚಣೆಯಿಂದ ಬಾಕಿಯುಳಿದ ಮನೆ ಕಾಮಗಾರಿ – ಶೀಘ್ರ ಪೂರ್ಣಗೊಳಿಸುವ ಭರವಸೆ

ಪರಿಹಾರದ ಹಣವನ್ನೇ ತಿಂದು ಹಾಕಿದ್ರಾ ಗುತ್ತಿಗಾರಿನ ಜನಪ್ರತಿನಿಧಿಗಳು, ಎಸ್ಸಿ ಮಹಿಳೆಗೆ ಮನೆ ಕಟ್ಟಿಕೊಡುವುದೇ ಬಿಜೆಪಿ ಆಡಳಿತ ಎಂಬ ತಲೆಬರಹದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ವರದಿಗಾಗಿ ಅಮರ ಸುದ್ದಿ ಸ್ಥಳಕ್ಕೆ ಭೇಟಿ ನೀಡಿತ್ತು.
ಗಾಳಿ ಮಳೆಗೆ ಮನೆ ಕಳೆದುಕೊಂಡ ನಾಲ್ಕೂರು ಗ್ರಾಮದ ಸಾಲ್ತಾಡಿಯ ಗಿರಿಜ ಎಂಬವರು ಮನೆ ತಾಂತ್ರಿಕ ಅಡಚಣೆಯಿಂದ ಅರ್ಧಕ್ಕೆ ಬಾಕಿಯಾಗಿದ್ದು, ಅತೀ ಶೀಘ್ರದಲ್ಲೇ ಮನೆ ಕಾಮಗಾರಿ ಪೂರ್ಣಗೊಳಿಸಿ ಕೊಡಲಾಗುವುದು ಎಂದು ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಅಚ್ಯುತ ಗುತ್ತಿಗಾರು ಹೇಳಿದ್ದಾರೆ.

. . . . . . . . .

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಾಡಿಯ ಗಿರಿಜ ಎಂಬ ಮಹಿಳೆಯ‌ ಮನೆ ಮಳೆಹಾನಿಗೊಳಗಾಗಿ ಸಂಪೂರ್ಣ ಹಾನಿಗೊಳಗಾಗಿತ್ತು. ಮನೆ ನಿರ್ಮಿಸಿಕೊಳ್ಳಲು ಆರ್ಥಿಕವಾಗಿ ಶಕ್ತವಾಗಿರದ ಗಿರಿಜರಿಗೆ ಆಗಿನ ತಹಶೀಲ್ದಾರರಾಗಿದ್ದ ಕುಂಞಿ ಅಹಮದ್ ರವರಿಗೆ ಪಂಚಾಯತ್ ಮೂಲಕ ಮನವಿ ನೀಡಿದ್ದ ಮೇರೆಗೆ ಮಳೆಹಾನಿ ಯೋಜನೆಯಲ್ಲಿ 5 ಲಕ್ಷ ಅನುದಾನದಲ್ಲಿ ಮನೆ ಮಂಜೂರಾಗಿತ್ತು. ಮಂಜೂರಾದ ಮನೆಯನ್ನು ಹಂತಹಂತವಾಗಿ ನಿರ್ಮಿಸಿಕೊಳ್ಳಲು ಪಂಚಾಯತ್ ಸೂಚಿಸಿದ್ದು, ಕೂಲಿ ಮಾಡಿ ಬದುಕುವ ಗಿರಿಜ ಹಣವಿಲ್ಲದ ಕಾರಣ ಮನೆ ನಿರ್ಮಿಸಲು ಮುಂದೆ ಬರಲಿಲ್ಲ. ಇನ್ನೇನೂ ಕೊನೆ ಕ್ಷಣದಲ್ಲಿ ಮಂಜೂರುಗೊಂಡ ಅನುದಾನ ಲ್ಯಾಪ್ಸ್ ಆಗುತ್ತದೆ ಎನ್ನುವಾಗ ಪಂಚಾಯತ್ ಸದಸ್ಯರೋರ್ವರು ಮನೆ ಕೆಲಸ ಮಾಡಿಕೊಡಲು ಮುಂದೆ ಬಂದಿದ್ದು, ಪಂಚಾಂಗ, ಗೋಡೆ, ಲಿಂಟಲ್ ವರೆಗೆ ಕೆಲಸ ಮುಗಿಸಿದ್ದರು. ಈ ಕೆಲಸಕ್ಕೆ ಅನುದಾನ ಬಿಡುಗಡೆಯಾಗಿದ್ದು, ಗಿರಿಜರವರ ಖಾತೆ ಮೂಲಕ ಮನೆಕೆಲಸದ ನೇತೃತ್ವ ವಹಿಸಿಕೊಂಡ ಪಂಚಾಯತ್ ಸದಸ್ಯರು ತಾವು ಮಾಡಿಕೊಟ್ಟ ಕೆಲಸದ ಹಣ‌ ಪಡೆದುಕೊಂಡಿದ್ದರು. ಇದೇ ವೇಳೆ ಮುಂದಿನ ಕೆಲಸ ಮಾಡುವ ಸಂದರ್ಭದಲ್ಲಿ ಲಾಕ್ ಡೌನ್ ಆದ ಕಾರಣ ಕಲ್ಲು, ಮರಳು ಮುಂತಾದ ಸಾಮಾಗ್ರಿ ಸಿಗದೇ ಮನೆಕೆಲಸ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಈ ಮನೆಯ ಕೆಲಸ ಮಾಡಿಸಿದ ಪಂಚಾಯತ್ ಸದಸ್ಯ ರಾಕೇಶ್ ಮತ್ತು ಅಧ್ಯಕ್ಷ ಅಚ್ಯುತ ರವರ ಮೇಲೆ ಹಣ‌ ಪಡೆದುಕೊಂಡ ಆರೋಪ ಕೇಳಿ ಬಂದಿತ್ತು. ಇದೀಗ ಮನೆ ಕೆಲಸಕ್ಕೆ ಮತ್ತೆ ಚಾಲನೆ ದೊರಕಿದೆ. ಕೆಲವೇ ದಿನಗಳಲ್ಲಿ ಮನೆಯ ಸ್ಲಾಬ್ ಕಾಮಗಾರಿ ಪ್ರಾರಂಭಿಸಿ, ಕಾಮಗಾರಿ ಪೂರ್ಣಗೊಳಿಸುವುದಾಗಿ ಅಚ್ಯುತ ಗುತ್ತಿಗಾರು ಅಮರ ಸುದ್ದಿಗೆ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading