- Wednesday
- April 2nd, 2025

ಪರಿಹಾರದ ಹಣವನ್ನೇ ತಿಂದು ಹಾಕಿದ್ರಾ ಗುತ್ತಿಗಾರಿನ ಜನಪ್ರತಿನಿಧಿಗಳು, ಎಸ್ಸಿ ಮಹಿಳೆಗೆ ಮನೆ ಕಟ್ಟಿಕೊಡುವುದೇ ಬಿಜೆಪಿ ಆಡಳಿತ ಎಂಬ ತಲೆಬರಹದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ವರದಿಗಾಗಿ ಅಮರ ಸುದ್ದಿ ಸ್ಥಳಕ್ಕೆ ಭೇಟಿ ನೀಡಿತ್ತು.ಗಾಳಿ ಮಳೆಗೆ ಮನೆ ಕಳೆದುಕೊಂಡ ನಾಲ್ಕೂರು ಗ್ರಾಮದ ಸಾಲ್ತಾಡಿಯ ಗಿರಿಜ ಎಂಬವರು ಮನೆ ತಾಂತ್ರಿಕ ಅಡಚಣೆಯಿಂದ ಅರ್ಧಕ್ಕೆ ಬಾಕಿಯಾಗಿದ್ದು, ಅತೀ ಶೀಘ್ರದಲ್ಲೇ...

ಸುಳ್ಯ ಕಸಬಾ ಗ್ರಾಮದ ಅರಂಬೂರು ಅಮರ ಸುಳ್ಯ ಸುದ್ದಿ ಸಿಬ್ಬಂದಿ ಪದ್ಮನಾಭ ಗೌಡರ ಸುಪುತ್ರಿ ಕೃತಿ ಯ ವಿವಾಹ ನಿಶ್ಚಿತಾರ್ಥವು ಆಲೆಟ್ಟಿ ಗ್ರಾಮದ ಮೂಕಮಲೆ (ಗಬ್ಬಲ್ಕಜೆ) ರಾಮಕೃಷ್ಣ ಗೌಡರ ಪುತ್ರ ಜಿನಿತ್ ರೊಂದಿಗೆ ವಧುವಿನ ಮನೆಯಲ್ಲಿ ಏ.4 ರಂದು ನಡೆಯಿತು.

ದ.ಕ.ಜಿಲ್ಲಾ ಪಂಚಾಯತ್, ಬಾಳಿಲ ಗ್ರಾ.ಪಂ. ಸುಳ್ಯ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಇದರ ಸಹಯೋಗದಲ್ಲಿ ಬಾಳಿಲ ಮತ್ತು ಮುಪ್ಪೇರ್ಯ ಗ್ರಾಮದ 45 ವರ್ಷ ಮೇಲ್ಪಟ್ಟ ಗ್ರಾಮಸ್ಥರಿಗೆ ಎ.5 ಮತ್ತು ಎ.8 ರಂದು ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ನಡೆಯಲಿದ್ದು ಮುಪ್ಪೇರ್ಯ...

ಕಾಯರ್ತೋಡಿಯಲ್ಲಿರುವ ಶ್ರೀ ವರದಾಯಿನಿ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದಲ್ಲಿ ಎ.11, 12 ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರಮದಾನ ಕಾರ್ಯಕ್ರಮ ಏ.4 ರಂದು ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕೇಸರರಾದ ಡಿ.ಎಸ್.ಕುಶಾಲಪ್ಪ, ಡಿ.ಎಸ್.ಗಿರೀಶ್ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಸರಗೋಡು ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿ ಕೆ. ಶ್ರೀಕಾಂತ್ ಅವರ ಪರವಾಗಿ ಕಾರಡ್ಕ ಗ್ರಾಮ ಪಂಚಾಯತ್ ವಠಾರದ ಅಂಬಿಕಾ ನಗರದಲ್ಲಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ, ಮತ ಯಾಚಿಸಲಾಯಿತು. ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬೂಡು ರಾಧಾಕೃಷ್ಣ ರೈ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಜಗದೀಶ್ ಸರಳಿಕುಂಜ, ಬಿಜೆಪಿ...

ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್, 60 ವರ್ಷ ದಾಟಿದ ವಯಸ್ಕರು ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ನೀಡಲಾಗಿದೆ. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು ವಾರದ...