
ಅರಂತೋಡು ಗ್ರಾಮದ ದೇರಾಜೆ ಮನೆಯ ಕಮಲಾಕ್ಷರವರ ಪುತ್ರ ರಾಜೇಶ್ ದೇರಾಜೆ ಮಾ.31 ರಂದು ಹೃದಯಾಘಾತದಿಂದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ರಾತ್ರಿ ಲೋ ಬಿ.ಪಿ.ಯಿಂದ ಅಸ್ವಸ್ಥಗೊಂಡ ಅವರನ್ನು ಮನೆಯವರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದಿದ್ದರು.
ಮೃತರು ತಂದೆ, ತಾಯಿ ಯಶೋದಾ, ಪತ್ನಿ ರಚನಾ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ, ಸಹೋದರ ಸತೀಶ್ ದೇರಾಜೆ, ಸಹೋದರಿಯರಾದ ಪ್ರಮೀಳಾ ಹಾಗೂ ಮಂಜುಳಾರನ್ನು ಅಗಲಿದ್ದಾರೆ. ಸುದ್ದಿ ಬಿಡುಗಡೆಯಲ್ಲಿ ಕೆಲ ವರ್ಷ ಉದ್ಯೋಗಿಯಾಗಿದ್ದ ರಾಜೇಶರು ಬಳಿಕ ವಿಷ್ಣು ಸರ್ಕಲ್‌ನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಎಲ್ಲರೊಂದಿಗೆ ನಗುಮುಖದೊಂದಿಗೆ ವ್ಯವಹರಿಸುತ್ತಿದ್ದರು. ಲಾಕ್‌ಡೌನ್ ಬಳಿಕ ಅದನ್ನು ನಿಲ್ಲಿಸಿದ್ದ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.