
ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಇರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳ್ಳರು ನುಗ್ಗಿ ಚಿನ್ನ, ನಗದು ಕಳವು ಮಾಡಿದ್ದಾರೆ. ಜ್ಯುವೆಲ್ಲರಿ ಅಂಗಡಿಯ ಬೀಗ ಒಡೆದ ಕಳ್ಳರು ಸುಮಾರು 10 ಲಕ್ಷ ಮೌಲ್ಯದ ಚಿನ್ನ ಹಾಗೂ ಸುಮಾರು ಐವತ್ತು ಸಾವಿರ ರೂಪಾಯಿ ಕಳವುಗೈದಿದ್ದಾರೆನ್ನಲಾಗಿದೆ. ಪತ್ರಿಕಾ ವಿತರಕರು ಅಂಗಡಿಗೆ ಪತ್ರಿಕೆ ಹಾಕುವ ಸಂದರ್ಭದಲ್ಲಿ ಬೀಗ ಒಡೆದಿರುವುದು ಕಂಡುಬಂತು. ಈ ವಿಷಯವನ್ನು ಅವರಿಗೆ ತಿಳಿಸಲಾಯಿತು ಬಳಿಕ ಅಂಗಡಿ ಮಾಲಕರು ಪೋಲೀಸರಿಗೆ ದೂರು ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲಿರುವ ಸಿಸಿ ಕ್ಯಾಮರಾ ಕೂಡ ಕದ್ದೊಯ್ದಿದ್ದಾರೆ.