
ಕಳಂಜ ಸಮೀಪದ ಅಯ್ಯನಕಟ್ಟೆ ಸೇತುವೆ ಪಕ್ಕದ ತಿರುವಿನಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಸೆ. 30 ರಂದು ವರದಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಜಖಾಂಗೊಂಡಿದ್ದು, ಸ್ಕೂಟಿ ಸವಾರ ಕಳಂಜ ಪಟ್ಟೆಯ ಕುಶಾಲಪ್ಪ ಗೌಡ ಹಾಗೂ ಬೈಕ್ ಸವಾರ ಕಳಂಜ ಮಣಿಮಜಲಿನ ಮಾರಪ್ಪ ಮೂಲ್ಯ ಎಂದು ಗುರುತಿಸಲಾಗಿದೆ. ಸವಾರರಿಬ್ಬರಿಗೂ ಸಣ್ಣ ಪ್ರಮಾಣದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.