ಕೇಂದ್ರ ಹಾಗೂ ರಾಜ್ಯ ಸರಕಾರಗಳ ಭೂ ಸುಧಾರಣಾ ಹಾಗೂ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ವಿರೋಧಿಸಿ ಅ.2 ರಂದು ಸುಳ್ಯದ ತಾಲೂಕು ಪಂಚಾಯತ್ ಎದುರು ಕಾಂಗ್ರೆಸ್ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ
ಸೆ.30 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. “ಕೆ.ಪಿ.ಸಿ.ಸಿ. ನಿರ್ದೇಶನದ ಮೇರೆ ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯಲಿದೆ. ಈ ಕಾಯ್ದೆ ತಿದ್ದುಪಡಿ ಸಂದರ್ಭ ಸದನದಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆಯ ಮೂಲಕ ಆದೇಶವನ್ನು ನೀಡಿದ್ದು ಸರಿಯಲ್ಲ ಎಂದರು.
ಇದನ್ನು ವಿರೋಧಿಸಿ ಅ.2 ರಿಂದ ಅ.31ರ ತನಕ ಬ್ಲಾಕ್ ವತಿಯಿಂದ ಸಹಿ ಸಂಗ್ರಹ ಮಾಡಿ, ಕೆ.ಪಿ.ಸಿ.ಸಿ.ಗೆ ಕಳುಹಿಸಿ ಅಲ್ಲಿಂದ ಎ.ಐ.ಸಿ.ಸಿ. ಮೂಲಕ ಕೇಂದ್ರದ ಸರಕಾರಕ್ಕೆ ಸಲ್ಲಿಸಲಾಗುತ್ತದೆ. 2 ಕೋಟಿ ಸಹಿ ಸಂಗ್ರಹ ದ ಗುರಿ ಹೊಂದಲಾಗಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಕಾಯ್ದೆ ಯ ಕುರಿತು ತಿಳಿಸಿ ಸಹಿ ಪಡೆಯಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಜೆ ಶಶಿಧರ ಅ.2 ರಂದು ಸುಳ್ಯದಲ್ಲಿ ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ್ನು ಆರಂಭಿಸಲಿದ್ದೇವೆ. ಇದರ ಮೂಲಕ ಜನರಿಗೆ ಇಲಾಖೆ, ಕಾನೂನು ಹೀಗೆ ವಿವಿಧ ವಿಷಯಗಳ ಕುರಿತು ಉಚಿತ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಕೆ.ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ್ ಕಲ್ಮಡ್ಕ, ನಂದರಾಜ ಸಂಕೇಶ ಇದ್ದರು.