ಗಾಂಧಿನಗರದ ಮೀನು ಮಾರುಕಟ್ಟೆ ಬಳಿ ಇರುವ ಬಾಡಿಗೆ ಕೋಣೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಕೋಣೆಗಳನ್ನು ಕೆಲವು ಪ್ರಭಾವಿ ಬೇನಾಮಿ ವ್ಯಕ್ತಿಗಳು ನಗರ ಪಂಚಾಯತ್ ಮೀಸಲು ಹೆಸರಿನಲ್ಲಿ ಕಡಿಮೆ ಬಾಡಿಗೆಗೆ ಎಲಂನಲ್ಲಿ ಪಡೆದು 3 ನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆ ನಿಗದಿಪಡಿಸಿ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ವಿವರ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ರಂಜಿತ್ ಪೂಜಾರಿ ಸುಳ್ಯ ರವರು ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಮನಗಂಡು ಕಟ್ಟಡದ ಕೋಣೆಯನ್ನು ಅಕ್ರಮವಾಗಿ ಪಡೆದುಕೊಂಡ ಪ್ರಭಾವಿ ವ್ಯಕ್ತಿಯು ಮಾಜಿ ನಗರ ಪಂಚಾಯತ್ ಅಧ್ಯಕ್ಷರ ಮುಖಾಂತರ ರಂಜಿತ್ ಪೂಜರಿ ಅವರಿಗೆ ಬೆದರಿಕೆ ಕರೆಯನ್ನು ಮಾಡಿಸಿದ್ದು. ಮೊಬೈಲ್ ಕರೆಯ ರೆಕಾರ್ಡ್ ನಲ್ಲಿ ನೀನು ಸ್ವಲ್ಪ ಜಾಗ್ರತೆ ಮಾಡಿಕೊ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿರುತ್ತಾರೆ. ಮೊಬೈಲ್ ಕರೆಯ ರೆಕಾರ್ಡನ್ನು ಮಾದ್ಯಮಕ್ಕೆ ಕಳುಹಿಸಿ ಕೊಟ್ಟು ಈ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ತೊಂದರೆ ಆದಲ್ಲಿ ಇದರ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳೇ ಕಾರಣರಾಗುತ್ತಾರೆ ಎಂದು ಮಾಹಿತಿಯನ್ನು ನೀಡಿರುತ್ತಾರೆ.
ಈ ಘಟನೆಯ ಕುರಿತು ರಂಜಿತ್ ಪೂಜಾರಿಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.