Ad Widget

ಅಪಘಾತದಲ್ಲಿ ಗಾಯಗೊಂಡ ಬಡ ಕುಟುಂಬದ ಗಾಯಾಳುವಿನ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ದಿನಾಂಕ 20.04.2020 ರಂದು ಸಂಪಾಜೆಯಿಂದ ಕಲ್ಲುಗುಂಡಿಗೆ ಬೈಕ್ ನಲ್ಲಿ ಚಲಿಸುತ್ತಿರುವಾಗ ಕಲ್ಲುಗುಂಡಿ ಅಂಚೆ ಕಚೇರಿ ಬಳಿ ಬೈಕ್ ಮತ್ತು ಸ್ಕೂಟರ್ ಅಪಘಾತ ನಡೆದಿದ್ದು ಬೈಕ್ ಸವಾರ ಗೌತಮ್.ಕೆ ಎನ್(20) ಇವರು ಭೀಕರ ಗಾಯಗೊಂಡು ಪ್ರಥಮ ಚಿಕಿತ್ಸೆಗೆ ಸುಳ್ಯ ಕೆ.ವಿ.ಜಿಗೆ ದಾಖಲುಗೊಂಡು ಹೆಚ್ಚಿನ ಚಿಕಿತ್ಸೆಗೆ ದಿನಾಂಕ 20.4.2020ರಂದು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರಿನಲ್ಲಿ ದಾಖಲಾಗಿದ್ದು ಸುಮಾರು 2 ತಿಂಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುತ್ತಾರೆ. ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬದ ಚಿಕಿತ್ಸೆ ನೆರವಿಗೆ ಸಂಪಾಜೆ ಗ್ರಾಮ ಬೈಲು ಭಾಗದ ವಿರಾಟ್ ಕೇಸರಿ ಬಳಗದ ಸರ್ವ ಸದಸ್ಯರುಗಳು ಹಾಗೂ ಸಹ ಮಿತ್ರರು ಧನಸಹಾಯ ಸಂಗ್ರಹಿಸಿ ಸುಮಾರು 52,000 ರೂ ಗಳನ್ನು ಆಸ್ಪತ್ರೆಯ ವೆಚ್ಚವನ್ನು ಭರಿಸಿರುತ್ತಾರೆ. ಇದೀಗ ಚೇತರಿಕೆಗೊಂಡಿದ್ದರು ಕೂಡ ಗೌತಮ್ ಅವರ ಎಡಗೈ ಸಂಪೂರ್ಣ ಶಾಶ್ವತ ಬಲಹೀನ ಹಾಗೂ ಕೈ ನರದ ಸಮಸ್ಯೆ ಎದುರಾಗಿದ್ದು ಕೆಲಸ ಮಾಡಿ ದುಡಿಯುವ ಆಧಾರ ಸ್ತಂಭವೇ ಕುಸಿದಿರುತ್ತದೆ. ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಂದಾಜು ವೆಚ್ಚ 3,50,000 ರೂಗಳು ಶಸ್ತ್ರಚಿಕಿತ್ಸೆಗೆ ವೆಚ್ಚವಾಗಬಹುದು ಮತ್ತು ಶಸ್ತ್ರಚಿಕಿತ್ಸೆ ಮಾಡಿದಲ್ಲಿ ಕ್ರಮೇಣ ಬಲಹೀನ ಸಮಸ್ಯೆ ನಿವಾರಣೆಯಾಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬವಾಗಿದ್ದು 2010ರಲ್ಲಿ ಆಶ್ರಯ ಯೋಜನೆಯ ಮನೆ ನಿರ್ಮಾಣವಾಗಿ ಇದುವರೆಗೆ ಮನೆಯ ಕೆಲಸ ಪೂರ್ತಿಯಾಗದೇ ಗೃಹ ಪ್ರವೇಶವು ಆಗದೆ ತುಂಬಾ ಬಡತನದಲ್ಲಿರುತ್ತಾರೆ ಹಾಗೂ ಮನೆಯ ಕೆಲಸ ಅರ್ಧದಲ್ಲಿ ನಿಂತು ಇಂದಿಗೆ 10 ವರುಷಗಳು ಕಳೆದಿವೆ, ವಯಸ್ಸಾದ ತಂದೆ ತಾಯಿಯನ್ನು ಹೊಂದಿರುವ ಇವರು ಸುಮಾರು 2,50,000ಲಕ್ಷದಷ್ಟು ಸಾಲವನ್ನು ಸಂಘ ಸಂಸ್ಥೆ ಸಹಕಾರಿ ಸಂಘಗಳಲ್ಲಿ ಹೊಂದಿರುತ್ತಾರೆ. ತೀವ್ರ ಬಡತನದಲ್ಲಿರುವ ತಂದೆಗೆ ಅರೋಗ್ಯ ಸಮಸ್ಯೆ ಇದ್ದರು ಕೂಡ ಕೆಲಸ ಮಾಡಿದ ಹಣ ಹಾಗೂ ತಾಯಿಯ ದುಡಿಮೆಯಿಂದ ಈ ಬಡ ಕುಟುಂಬ ಸಾಗುತ್ತಿದೆ. ಶಾಶ್ವತ ಬಲಹೀನ ಹೊಂದಿರುವ ಗೌತಮ್ ಅವರ ಅರೋಗ್ಯ ಸಮಸ್ಯೆ ಬಗೆಹರಿಸಲು ವೈದ್ಯರ ಮಾಹಿತಿ ಪ್ರಕಾರ ಸರ್ಜರಿ ಶಸ್ತ್ರಚಿಕಿತ್ಸೆಗೆ ಅಂದಾಜು 3,50,000 ಖರ್ಚಾಗುತ್ತದೆ. ಆರ್ಥಿಕವಾಗಿ ಕಡುಬಡತನದಲ್ಲಿರುವ ಇವರು ಇತರ ಸಂಘ ಸಂಸ್ಥೆಗಳ ಸಹಕಾರದ ನಿರೀಕ್ಷೆಯಲ್ಲಿ ಇದ್ದಾರೆ. ಗಾಯಾಳು ಗೌತಮ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಕಾಯಕದಲ್ಲಿ ತೊಡಗಿಸಿಕೊಂಡು ಸಂಸಾರ ಸಾಗಿಸುವಂತಾಗ ಬೇಕಾದರೇ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಧನ ಸಹಾಯ ನೀಡಲಿಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ಧನ ಸಹಾಯವನ್ನು ನೀಡಿ ಬಡ ಕುಟುಂಬಕ್ಕೆ ನೆರವಾಗಬೇಕಾಗಿ ವಿನಂತಿ

. . . . . . . . .

ಹೆಸರು: ಗೌತಮ್ ಕೆ.ಎನ್ (GOWTHAM K N)
ಬ್ಯಾಂಕ್:ಕೆನರಾ ಬ್ಯಾಂಕ್ ಕಲ್ಲುಗುಂಡಿ
ಖಾತೆ ಸಂಖ್ಯೆ :0643101049842
ಐ. ಎಫ್.ಎಸ್.ಸಿ: CNRB0000643
ಫೋನ್ ನಂ: 9743692758
9482101550

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading