ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ಮಸೂದೆ ಯನ್ನು ವಿರೋಧಿಸಿ ಗಡಿಭಾಗವಾದ ಸಂಪಾಜೆ ಗೇಟ್ ಬಳಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಹನಿಫ್ ಸಂಪಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಶ್ರೀ ಹೊಸೂರು ಸೂರಜ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸುರೇಶ್ ಪಿ.ಎಲ್, ಚಂಬು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರವಿರಾಜ್ ಹೊಸೂರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ, ಮಹಿಳಾ ಘಟಕದ ಸಂಪಾಜೆ ವಲಯ ಅಧ್ಯಕ್ಷೆ ಕುಮಾರಿ ಪ್ರೀತಿಕಾ, ರಿಯಾಜ್ ಕೊಯನಾಡು, ಶ್ರೀ ವಾಸು ಎಂಪಿ, ಮೋಹನ ಬಾಳೆಕಜೆ, ಶ್ರೀ ಜಾಫರ್ ಕೊಯನಾಡು, ಶ್ರೀ ದೇವಜನ ದೇವಪ್ಪ, ಶ್ರೀ ರಘುನಾಥ್ ಬಿ, ಮಾಧವ ಕೆವಿ, ಮಹೇಂದ್ರ ಚಡಾವು, ನಸೀರ್ ಮಾಡಶೆರಿ, ಶ್ರೀ ತಿಲಕ ಚಡಾವು, ಉಮೇಶ ಪೂಜಾರಿ, ಸುರೇಂದ್ರ, ರಫೀಕ್ ಚಡಾವು, ಉಮ್ಮರ್ ಚಡಾವು, ಜಯ ಪ್ರಕಾಶ್ ಗುಡ್ಡೆಗದ್ದೆ, ಗಣೇಶ್ ಗುಡ್ಡೆಗದ್ದೆ, ಸುರೇಂದ್ರ ಕೊಯನಾಡು, ಹರೀಶ್ ಮತ್ತಿತರರು ಭಾಗವಹಿಸಿದರು.
- Friday
- November 22nd, 2024