Ad Widget

ನಗರ ಪಂಚಾಯತ್ ಚುನಾವಣೆ ಕಳೆದು ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ಅಧಿಕಾರ ಸಿಗದೆ , ಮತದಾರರಿಗೆ ಉತ್ತರಿಸಲೂ ಸಾಧ್ಯವಾಗದೆ , ಸಂಕಷ್ಟದಲ್ಲಿ ಸಿಲುಕಿದ ಸದಸ್ಯರುಗಳು – ಅಧಿಕಾರಿಗಳದೇ ದರ್ಬಾರು

ಸ್ಥಳೀಯ ನಗರ ಪಂಚಾಯತಿ ಚುನಾವಣೆ ಕಳೆದು 16 ತಿಂಗಳುಗಳೇ ಕಳೆಯಿತು. ಆದರೆ ಆಡಳಿತ ನಡೆಸಲು ಸಮಿತಿ ರಚನೆಯಾಗದೆ , ಮತನೀಡಿ ಗೆಲ್ಲಿಸಿ ಕಳುಹಿಸಿದ ತಮ್ಮ ತಮ್ಮ ವಾರ್ಡಿನ ಜನತೆಗೆ ಉತ್ತರಿಸಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯ ನಗರ ಪಂಚಾಯತ್ ನ ಸದಸ್ಯರುಗಳು ಸಂಕಷ್ಟದಲ್ಲಿ ಸಿಲುಕಿರುತ್ತಾರೆ.ಸುಳ್ಯದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸಮಸ್ಯೆಗಳ ಮಹಾಪೂರವೇ ಎದ್ದುಕಾಣುತ್ತಿದೆ.ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಹಲವು ಕಡೆಗಳಲ್ಲಿ ಒಡೆದು ಹೋಗಿ ನೀರು ಪೋಲಾಗುತ್ತಿದೆ.

. . . . . .

ರಸ್ತೆಗಳೆಲ್ಲ  ಹೊಂಡ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಕೆಲವು ವಾರ್ಡಿನ ರಸ್ತೆಯ ಇಕ್ಕೆಲಗಳಲ್ಲಿ ಕಾಡುಗಳಿಂದ ತುಂಬಿಕೊಂಡು ವಾರ್ಡ್ ಯಾವುದು ಕಾಡು ಯಾವುದು ಎಂದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗಳಲ್ಲಿ ಅಧಿಕಾರಿಗಳದೇ ದರ್ಬಾರು ಆದ ಕಾರಣ , ಇತ್ತ ಮತದಾರರಿಂದ ಮತಗಳನ್ನು ಪಡೆದು ಗೆದ್ದುಬಂದ ಅಭ್ಯರ್ಥಿಗಳಿಗೆ ಬೆಲೆನೇ ಇಲ್ಲದಂತಾಗಿದೆ ಎಂದು ನಗರ ಪಂಚಾಯತ್ ಸದಸ್ಯರೋರ್ವರು ಹೇಳಿಕೊಳ್ಳುತ್ತಿದ್ದಾರೆ. ಜನರು ತಮ್ಮ ತಮ್ಮ ವಾರ್ಡುಗಳ ಮೂಲಭೂತ ಸಮಸ್ಯೆಗಳನ್ನು ನಮ್ಮಲ್ಲಿ ಹೇಳಿಕೊಂಡಾಗ ನಾವು ಅದನ್ನು ಅಧಿಕಾರಿಗಳ ಬಳಿ ಹೇಳಬೇಕಾಗಿದೆ.

ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದಾಗ ಜನತೆ ನಮ್ಮನ್ನು ಅವಿಶ್ವಾಸದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಪ್ರಕಾರ ಈ ರೀತಿಯ ವ್ಯವಸ್ಥೆಗಳಿಂದ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕಲು ಕಾರಣವಾಗುತ್ತಿದೆ.ಬಡಜನತೆಯ ಮೂಲಭೂತ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುವುದು ಸಾಧ್ಯವಾಗದ ಸ್ಥಿತಿಗೆ ನಾವು ಸಿಲುಕಿದ್ದೇವೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಯಾವುದೇ ಬರಲಿ ಯಾವುದೇ ಹೋಗಲಿ ಜನಸಾಮಾನ್ಯರ ಗೋಳು ಕೇಳುವವರು ಇಲ್ಲದ ದುಸ್ಥಿತಿಗೆ ಬಂದಿದೆ.

ಅಧಿಕಾರ ಅಧಿಕಾರ ಎಂದು ಜನರಿಂದ ಕಾಡಿಬೇಡಿ ಮತವನ್ನು ಪಡೆದು ಗೆದ್ದು ಬಂದ ನಂತರ ಅಧಿಕಾರ ಚಲಾಯಿಸಲು ಅವಕಾಶ ಸಿಗದೇ ತಮ್ಮ-ತಮ್ಮ ವಾರ್ಡಿನ ಜನರ ಮುಂದೆ ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳಿಗೆ ಬಂದಿರುವುದಂತೂ ಸತ್ಯ ಸಂಗತಿಯಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!