Ad Widget

ಬಡ ರೋಗಿಯ ಚಿಕಿತ್ಸೆಗೆ ಸಹಾಯ ಹಸ್ತ ನೀಡಿದ ಮುಳ್ಯ ಅಟ್ಲೂರಿನ ಹೆಲ್ಪಿಂಗ್ ವಾರಿಯರ್ಸ್


ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರು ಚಿಕಿತ್ಸೆಯ ವೆಚ್ಚಕ್ಕಾಗಿ ಮಾಧ್ಯಮದ ಮೂಲಕ ದಾನಿಗಳಿಂದ ಸಹಾಯಯಾಚಿಸಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟಿನಲ್ಲಿ ಬಂದ ವರದಿಯನ್ನು ವೀಕ್ಷಿಸಿ ಮುಳ್ಯ ಅಟ್ಲೂರು ಪರಿಸರದ ಹೆಲ್ಪಿಂಗ್ ವಾರಿಯರ್ಸ್ ತಂಡವು ಇವರ ಮನವಿಗೆ ಸ್ಪಂದಿಸಿ ಧನಸಹಾಯ ನೀಡಿ ಸಹಕರಿಸಿದ್ದಾರೆ. ಇವರ ಚಿಕಿತ್ಸೆಗಾಗಿ ಬಹಳ ಹೆಚ್ಚಿನ ಮೊತ್ತ ಅವಶ್ಯಕತೆಯಿದ್ದು ದಾನಿಗಳ ಸಹಾಯದಿಂದ ಮಾತ್ರ ಸಾಧ್ಯವೆಂದು ಮನೆಯವರು ತಿಳಿಸಿದ್ದಾರೆ. ಆದುದರಿಂದ ಸಹೃದಯಿ ಬಂಧುಗಳಾದ ತಾವು ಸಾಧ್ಯವಾದಷ್ಟು ಆರ್ಥಿಕ ಸಹಕಾರ ನೀಡಬೇಕಾಗಿ ವಿನಂತಿ ಮಾಡಿರುತ್ತಾರೆ.

. . . . .

🙏ಸುಬ್ರಹ್ಮಣ್ಯ : ಬಡ ಜೀವದ ಚಿಕಿತ್ಸೆಗೆ ನೆರವಾಗುವಿರಾ https://amarasuddi.com/2020/09/26/lakshinarayana-sub/

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!