ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕದಾದ್ಯಂತ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆಯನ್ನು ಬೆಂಬಲಿಸಿ ಸಾಂಕೇತಿಕವಾಗಿ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಕರವೇ ಕಾರ್ಯಕರ್ತರು ಇಂದು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅದ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ನಂತರ ಸುಳ್ಯ ತಾಲೂಕು ಕಚೇರಿ ತೆರಳಿ ಕೇಂದ್ರ ಸರ್ಕಾರಕ್ಕೆ ಸುಳ್ಯ ಉಪತಹಶೀಲ್ದಾರ್ ಮುಖಾಂತರ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಕರವೇ ಸದಸ್ಯರಾದ ಧನಂಜಯ ಪಲ್ಲತಡ್ಕ, ಗಣೇಶ್ ಪಲ್ಲತಡ್ಕ, ಮೋಹನ್ ಕಲ್ಲಗುಡ್ಡೆ, ಗಿರೀಶ್ ಕಲ್ಲಗುಡ್ಡೆ, ಮಂಜುನಾಥ್ ಬಡ್ದಡ್ಕ, ಸತೀಶ್ ನಾಯಕ್, ಸುನಿಲ್ ಕಾಂತಮಂಗಾಲ, ಜಯರಾಜ್ ಕಾಂತಮಂಗಲ, ಅಹಮ್ಮದ್ ಮೇನಾಲ, ಶರೀಫ್ ಮೆನಾಲ, ವಿಜಯ ಕಾಂತಮಂಗಲ, ಯೋಗಿಶ್ ಕಾಂತಮಂಗಲ ಮತ್ತಿತರರು ಉಪಸ್ಥಿತರಿದ್ದರು.
- Sunday
- November 24th, 2024