ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಹಾಗೂ ಕಲಾವಿಕಾಸ (ರಿ.) ಕಳಂಜ ಇದರ ಸಂಯುಕ್ತ ಆಶ್ರಯದಲ್ಲಿ ವಿಷ್ಣುನಗರ ಕಳಂಜದಲ್ಲಿ ‘ಬಲೆ ತುಳು ಲಿಫಿ ಕಲ್ಪುಗ’ ಕಾರ್ಯಾಗಾರವು ಸೆ.27 ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಅರ್ಚಕರಾದ ಶ್ರೀ ನರಸಿಂಹ ಭಟ್ ಬಾಳಿಲ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ತುಳು ಲಿಫಿ ಶಿಕ್ಷಕರಾದ ನಿಶ್ಮಿತ್ ರಾಮಕುಂಜ, ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ಹಾಗೂ ಕಲಾವಿಕಾಸ (ರಿ.) ಕಳಂಜ ಇದರ ಅಧ್ಯಕ್ಷರಾದ ಲೋಹಿತ್ ಕಟ್ಟತ್ತಾರು ಉಪಸ್ಥಿತರಿದ್ದರು.
ತುಳು ಭಾಷೆಯನ್ನು ತಳಮಟ್ಟದಿಂದಲೇ ಉಳಿಸಿ ಬೆಳೆಸುವ ಹಾಗೂ ತುಳು ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಸೆ.27 ರಿಂದ ಆರಂಭಗೊಂಡು ಮುಂದಿನ 3 ವಾರಗಳ ಕಾಲ( ಪ್ರತಿ ಭಾನುವಾರ ) ಈ ಕಾರ್ಯಾಗಾರ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಭಾಗವಹಿಸಿ ಈ ಕಾರ್ಯಾಗಾರವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
- Friday
- November 22nd, 2024