

ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಸಭೆ ಇಂದು ಸುಳ್ಯ ದ ಗಿರಿದರ್ಶಿನಿ ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು. ಕೆ ಪಿ ಸಿ ಸಿ ಸದಸ್ಯ ಡಾ ಬಿ ರಘು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ಯನ್ನು ಘಟಕದ ಅಧ್ಯಕ್ಷ ರಾದ ಲಕ್ಷ್ಮೀ ಸುಬ್ರಹ್ಮಣ್ಯ ವಹಿಸಿದ್ದರು. ಡಾ ಬಿ ರಘು ರವರು ಮಾತನಾಡಿ ಪರಿಶಿಷ್ಟ ಜಾತಿ ಸಮಾಜವನ್ನು ಮುಖ್ಯ ವಾಹಿನಿಗೆ ಬರಲು ಕಾಂಗ್ರೆಸ್ ಇಡೀ ದೇಶದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸಿದೆ. ಪರಿಶಿಷ್ಟ ಜಾತಿ ಘಟಕ ಬ್ಲಾಕ್ ಕಾಂಗ್ರೆಸ್ ಸಮಿತಿ ಯ ಮಾರ್ಗ ದರ್ಶನ ದಂತೆ ಪಕ್ಷದ ಕಾರ್ಯಕ್ರಮ ಗಳನ್ನು ರೂಪಿಸಿಕೊಂಡು ಪಕ್ಷ ಸಂಘಟನೆ ಯನ್ನು ಯಶಸ್ವಿ ಯಾಗಿ ನಿರ್ವಹಿಸಲು ಕರೆ ನೀಡಿದರು. ನೂತನ ಅಧ್ಯಕ್ಷರಾಗಿ ಆನಂದ ಬೆಳ್ಳಾರೆ ಯವರನ್ನು ಮತ್ತು ಕಾರ್ಯದರ್ಶಿ ಯಾಗಿ ಪದ್ಮನಾಭ ಕುಂಟಿಕಾನ ರನ್ನು ಆಯ್ಕೆ ಮಾಡಲಾಯಿತು. ಘಟಕ್ಕೆ ಇತರ ಪದಾಧಿಕಾರಿಗಳ ಆಯ್ಕೆ ಈ ಸಂದರ್ಭದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅನಿಲ್ ರೈ ಬೆಳ್ಳಾರೆ, ಪೆರುವಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ಶ್ರೀಮತಿ ಅನುಸೂಯ , ವಸಂತ ಕುದ್ಪಾಜೆ, ಚೋಮ ಮರ್ಕಂಜ, ಕೊರಗಪ್ಪ ಕೊಯಿಲ, ಬಾಬು ಕನಕಮಜಲು, ಅಣ್ಣು ಕಟ್ಟಕೋಡಿ ನಾರಾಯಣ ಕಲಂಬಳ, ದಾಮೋದರ ಕೊಡಿಯಾಲ, ಜನಾರ್ದನ ಗೌರಿಹೊಳೆ, ನಾರಾಯಣ ಜಟ್ಟಿಪಳ್ಳ, ಮೋನಪ್ಪ ರಾಜಾರಾಂ ಪುರ, ಸತೀಶ್ ಏನೆಕಲ್ಲು, ಸುಂದರ ಪಾತೊಟ್ಟಿ, ಭವಾನಿ ಶಂಕರ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.