Ad Widget

ಹಿಂಜಾವೇ ಆರಂತೋಡು ವಲಯದ ಮರ್ಕಂಜ ಘಟಕ ರಚನೆ – ಅಧ್ಯಕ್ಷರಾಗಿ ನವೀನ್ ನಳಿಯಾರು

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಆರಂತೋಡು ವಲಯದ ಮರ್ಕಂಜ ಘಟಕ’ವು ಇಂದು ರಚನೆಗೊಂಡಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ವಾಸುದೇವ ಆಚಾರ್ಯ, ಅಧ್ಯಕ್ಷರಾಗಿ ನವೀನ್ ನಳಿಯಾರು, ಉಪಾಧ್ಯಕ್ಷರಾಗಿ ಚರಣ್ ಗುತ್ತುಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕಂಜಿಪಿಲಿ, ಕಾರ್ಯದರ್ಶಿಗಳಾಗಿ ಶಶಿಕಾಂತ್ ಬೂಡು, ಪ್ರವೀಣ್ ಕುಮಾರ್ ಹಲ್ದಡ್ಕ, ಸಂಪರ್ಕ ಪ್ರಮುಖರಾಗಿ ಪ್ರಜ್ವಲ್ ದೇಶಕೋಡಿ, ಪ್ರಚಾರ ಪ್ರಮುಖರಾಗಿ ವಿನ್ಯಾಸ್ ಹೊಸೋಳಿಕೆ, ಹಿಂದುಯುವವಾಹಿನಿ ಸಮರ್ಥ್, ಹಾಗೂ ಮಾತೃಸುರಕ್ಷಾ ಪ್ರಮುಖರಾಗಿ ನಿರಂಜನ್ ಆಯ್ಕೆಗೊಂಡರು.ಈ ನೂತನ ಘಟಕದ ರಚನೆ ಸಂದರ್ಭದಲ್ಲಿ , ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಜಯಂತ್ ಮಡಪ್ಪಾಡಿ, ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಕೊಡಿಯಾಲ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ, ಹಾಗೂ ಗ್ರಾಮ ವಿಕಾಸ ಸಮಿತಿಯ ಸಂಚಾಲಕ್ ಗೋವಿಂದ, ಯತೀಶ್ ಕಂಜಿಪಿಲಿ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮನಮೋಹನ್ ಉಪಸ್ಥಿತರಿದ್ದರು. ಜಯಂತ್ ಮಡಪ್ಪಾಡಿ ಹಿಂದೂ ಜಾಗರಣ ವೇದಿಕೆ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದರು. ಮನಮೋಹನ್ ಸ್ವಾಗತಿಸಿ, ಹರೀಶ್ ಕಂಜಿಪಿಲಿ ನೂತನ ಘಟಕಕ್ಕೆ ಶುಭಹಾರೈಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading