ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ಹಾಗೂ ರೈತ ವಿರೋಧಿ ಮಸೂದೆ ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ವ್ಯಾಪ್ತಿ ದಲಿತ ಸಂಘಟನೆಗಳು ,ಕಾಮಿ೯ಕ ಸಂಘಟನೆ , ರೈತ ಸಂಘ ರೈತಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸೆ. 28ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಜನತಾದಳ (ಜ್ಯಾ) ಸುಳ್ಯ ಘಟಕವು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಹಾಗೂ ಈ ಹೋರಾಟದಲ್ಲಿ ಸುಳ್ಯ ತಾಲೂಕು ಸಮಿತಿಯ ಹಾಗೂ ಗ್ರಾಮ ಸಮಿತಿಯ ಕಾರ್ಯಕರ್ತರು, ನಾಯಕರು ಸುಳ್ಯ ಶಾಸ್ತ್ರಿ ಸಕ೯ಲ್ ನಿಂದ ನಡೆಯುವ ಪ್ರತಿಭಟನ ಮೆರವಣಿಗೆಗೂ ಹಾಗೂ ಸುಳ್ಯ ಖಾಸಾಗಿ ಬಸ್ ನಿಲ್ದಾಣದ ಬಳಿ ನಡೆಯುವ ಪ್ರತಿಭಟನ ಸಭೆಯಲ್ಲಿ ಭಾಗವಹಿಸುವಂತೆ ಸುಳ್ಯ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Friday
- November 1st, 2024