ಹವಿನ್ ಗುಂಡ್ಯಮನೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅರೆಭಾಷೆ ಕಿರು ಚಿತ್ರದ ಮುಹೂರ್ತ ಇಂದು ಗುಂಡ್ಯಮನೆಯ ಸ್ಥಾನದಲ್ಲಿ ನಡೆಯಿತು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಖ್ಯಾತ ರಂಗ ನಿರ್ದೇಶಕ ರಂಗಮನೆಯ ಜೀವನ್ ರಾಂ ಸುಳ್ಯ, ೯೩.೫ ರೆಡ್ ಎಫ್.ಎಂ ನ ಕಂಬಳಮನೆ ತ್ರಿಶೂಲ್, ಸಿನಿಮಾ ತಂಡದವರು ಮತ್ತು ಗುಂಡ್ಯಮನೆ ಕುಟುಂಬಸ್ಥರು ಉಪಸ್ಥಿತರಿದ್ದರು..
ಸಿನಿಮಾ ಚಿತ್ರೀಕರಣ ಇಂದಿನಿಂದ ಪ್ರಾರಂಭಗೊಂಡಿದ್ದು ಮುಂದಿನ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.