ಸೆ.28 ರಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸುಳ್ಯ ತಾಲೂಕು ಘಟಕ ಹಾಗು ಕಾರ್ಮಿಕ ಸಂಘ ಹಾಗು ಇನ್ನಿತ್ತರ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ಕಾರ್ಮಿಕ ವಿರೋಧಿ ಹಾಗು ಇನ್ನಿತ್ತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಬಂದ್ , ಪ್ರತಿಭಟನ ಮೆರವಣಿಗೆ , ಪ್ರತಿಭಟನ ಸಭೆ ನಡೆಯಲಿದ್ದು ಇದಕ್ಕೆ ಸಹಕರಿಸುವಂತೆ ಅಂಗಡಿ ಮಾಲೀಕರಿಗೆ ಮನವಿಯನ್ನು ಅಂಗಡಿ ಅಂಗಡಿಗಳಿಗೆ ತೆರಳಿ ನೀಡಲಾಯಿತು . ಈ ಸಂದರ್ಭದಲ್ಲಿ ರೈತ ನಾಯಕರಾದ ಎಂ ವೆಂಕಪ್ಪ ಗೌಡ , ಲೋಲಜಾಕ್ಷ ಭೂತಕಲ್ಲು , ತೀರ್ಥರಾಮ ಉಳುವಾರು , ಧರ್ಮಪಾಲ ಕೊಯಿಂಗಾಜೆ , ಹರಿ ಪಂಡಿತ್ , ರಾಮಚಂದ್ರ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.
- Friday
- November 1st, 2024